ವೀರಾಜಪೇಟೆ, ಡಿ. 23: ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಏಡ್ಸ್ ಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಉಪನ್ಯಾಸಕ ಇಯನ್ ಆಳ್ವಾರೀಸ್ ಜಾಥಾಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಉಪನ್ಯಾಸಕ ಚಾರ್ಲ್ಸ್ ಡಿಸೋಜಾ ಮಾತನಾಡಿ, ಮಾರಕ ರೋಗವಾದ ಏಡ್ಸ್ ಅನ್ನು ತಡೆಗಟ್ಟುವಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದು. ರೋಗದ ಕುರಿತು ಸಾರ್ವಜನಿಕರಿಗೆ ಮತ್ತಷ್ಟು ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದರು. ಕಾಲೇಜಿನ ಎನ್‍ಎಸ್‍ಎಸ್ ಘಟಕದ ಅಧಿಕಾರಿ ಎಂ. ದಿನೇಶ್ ಜಾಥಾದÀ ನೇತೃತ್ವ ವಹಿಸಿದ್ದರು. ಉಪನ್ಯಾಸಕರಾದ ಸಿ.ಯು. ರೋಸಿ ಮತ್ತು ಪಿ.ಎ. ಸುಜಾತ ಉಪಸ್ಥಿತರಿದ್ದರು. ಜಾಥಾ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.