ಸೋಮವಾರಪೇಟೆ, ಡಿ. 23: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಿ.ಕೆ. ಸವಿತ ಆಯ್ಕೆಯಾಗಿದ್ದಾರೆ.

ಈ ಹಿಂದೆ ಉಪಾಧ್ಯಕ್ಷರಾಗಿದ್ದ ಜಿ.ವಿ. ನಾಗರತ್ನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಬಿಜೆಪಿ ಬೆಂಬಲಿತ ಸವಿತ ಹಾಗೂ ಜೆಡಿಎಸ್‍ನಿಂದ ಶಿವಮ್ಮ ನಾಮಪತ್ರ ಸಲ್ಲಿಸಿದ್ದರು.

ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ತಲಾ 5 ಸ್ಥಾನಗಳಿರುವದರಿಂದ ಎರಡೂ ಪಕ್ಷಗಳು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದವು. ತಹಶೀಲ್ದಾರ್ ಪಿ.ಎಸ್. ಮಹೇಶ್ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಸವಿತ ಎರಡು ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದರು.

ಸದಸ್ಯರಾದ ನಾಗರತ್ನ, ಹೆಚ್.ಹೆಚ್. ಧರ್ಮಾಚಾರಿ, ಎಸ್.ಎನ್. ಪೃಥ್ವಿ, ಜಿತೇಂದ್ರ, ಎಂ.ಡಿ. ಹರೀಶ್, ಟಿ.ಟಿ. ಹೇಮಂತ್, ಕೆ.ಎಲ್. ಲಕ್ಷ್ಮೀ, ಪ್ರೇಮಾ ಚುನಾವಣೆಯಲ್ಲಿ ಭಾಗವಹಿಸಿದ್ದರು.