ದುಬೈ, ಡಿ. 23: ಯುಎಇಯಲ್ಲಿ ನೆಲೆಸಿರುವ ಕೊಂಡಂಗೇರಿಯ ಅನಿವಾಸಿ ಸದಸ್ಯರುಗಳ ಸಂಘಟನೆ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಯುಎಇ ಇದರ ವಾರ್ಷಿಕ ಮಹಾ ಸಭೆ ಮತ್ತು ಮೀಲಾದ್-ಮೌಲೂದ್ ಕಾರ್ಯಕ್ರಮ ತಾ. 16 ರಂದು ಅಜ್ಮಾನ್ ಕೆಸಿಎಫ್ ಸಭಾಂಗಣದಲ್ಲಿ ನಡೆಯಿತು. ಸಂಘಟನೆ ಅಧ್ಯಕ್ಷ ಜನಾಬ್ ಹೆಚ್.ಹೆಚ್. ಅಬ್ದುಲ್ಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌಲೂದ್ ಪಾರಾಯಣಕ್ಕೆ ಹಂಝ ಸಅದಿ ಉಸ್ತಾದ್ ನೇತೃತ್ವವನ್ನು ನೀಡಿದರು. ಸಂಘಟನೆಯ ಹಿರಿಯ ಸದಸ್ಯರುಗಳಾದ ಪಿ.ಇ. ಮುಹಮ್ಮದ್ ಹಾಜಿ ಮತ್ತು ಎನ್.ಇ. ಅಬ್ದುಲ್ಲಾ ಅವರುಗಳನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷÀ ಶಾಫಿ ಸಖಾಫಿ ಸ್ವಾಗತಿಸಿ, ಎ.ಹೆಚ್. ಇರ್ಷಾದ್ ವಂದಿಸಿದರು. ಇದೇ ಸಂದರ್ಭ ನೂತನ ಸಾಲಿನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹೆಚ್.ಹೆಚ್. ಅಬ್ದುಲ್ಲ, ಪ್ರಧಾನ ಕಾರ್ಯದರ್ಶಿಯಾಗಿ ಎ.ಹೆಚ್. ಇರ್ಷಾದ್ ಮರು ಆಯ್ಕೆಗೊಂಡರು. ಕೋಶಾಧಿಕಾರಿಯಾಗಿ ಪಿ.ಇ. ಮುಹಮ್ಮದ್ ಹಾಜಿ, ಉಪಾಧ್ಯಕ್ಷರುಗಳಾಗಿ ಜೆ.ಯು. ಶಾಫಿ ಸಖಾಫಿ, ಪಿ.ಎ. ಹಸನ್ ಕುಞÂ, ಎನ್.ಇ. ಅಬ್ದುಲ್ಲ, ಸಹ ಕಾರ್ಯದರ್ಶಿಗಳಾಗಿ ಕೆ.ವೈ. ರಿಯಾಝ್, ಜೆ.ಎಸ್. ಇರ್ಷಾದ್, ಎ.ಇ. ರಝಾಕ್, ಪಿ.ಎ. ಸಲಾಂ, ಮುಜೀಬ್ ಮಾಸ್ಟರ್ ಹಾಗೂ 12 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.