ಮಡಿಕೇರಿ, ಡಿ. 23: ಪ್ರತಿಯೊಬ್ಬ ವಿದ್ಯಾರ್ಥಿಗೂ ಯಶಸ್ಸು ಸಾಧಿಸಲು ಶ್ರದ್ಧೆ ಬಹಳ ಮುಖ್ಯ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.

ನಗರದ ಸ.ಪ.ಪೂ. ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಿ.ಯು.ಸಿ. ಅಂದರೆ ಜೀವನದ ಬದಲಾವಣೆಯ ಹಂತ ಬುದ್ಧಿವಂತಿಕೆ ಯಿಂದ ಮಾತ್ರ ಬದಲಾವಣೆ ಸಾಧ್ಯ. ಉಪನ್ಯಾಸಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹಾನ್ ಚೇತನಗಳಾಗಬೇಕು. ಗುರುಗಳನ್ನು ನಾವು ಬ್ರಹ್ಮನಿಗೆ ಹೋಲಿಸುತ್ತೇವೆ ಎಂದು ಹೇಳಿದರು.

ಉಪನ್ಯಾಸಕರು ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳಬೇಕು. ಮಕ್ಕಳ ಭವಿಷ್ಯದ ಬಗ್ಗೆ ಪ್ರತಿಯೊಬ್ಬ ತಂದೆ-ತಾಯಿಗಳು ಚಿಂತಿಸುತ್ತಾರೆ. ಅದನ್ನು ಸಾಧನೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ‘ಓದಿ ಬೋಧಕನಾಗು ಸಾಧಿಸಿ ಸಾಧಕನಾಗಬೇಕು’ ಎಂಬ ನಾಣ್ನುಡಿಯನ್ನು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕೆÀ್ಷ ಲೋಕೇಶ್ವರಿ ಗೋಪಾಲ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಶಿಕ್ಷಣ ಮುಖ್ಯ. ವಿದ್ಯಾರ್ಥಿ ಗಳಿಗೆ ಭವಿಷ್ಯದ ಬಗ್ಗೆ ಮಹತ್ವದ ಆಕಾಂಕ್ಷೆ ಇರಬೇಕು ಎಂದರು. ನಾವು ದೇಶ ಕಾಯೋ ಸೈನಿಕರಿಗೆ, ಅನ್ನನಿಡೋ ರೈತನಿಗೆ, ವಿದ್ಯೆ ಕಲಿಸೋ ಗುರುಗಳಿಗೆ ಮೊದಲು ಗೌರವ ನೀಡಬೇಕು ವಿದ್ಯಾರ್ಥಿಗಳು ಒಳ್ಳೆಯದನ್ನು ಸ್ವೀಕರಿಸಬೇಕು, ಕೆಟ್ಟದ್ದನ್ನು ಬಿಡಬೇಕು.

ವಿದ್ಯಾರ್ಥಿಗಳು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬ ತಂದೆ-ತಾಯಿಗಳು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣುತ್ತಾರೆ ಎಂದು ಅವರು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್. ಮೋಹನ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಎ.ಪಿ. ಧನಂಜಯ, ಕಾಲೇಜಿನ ಪ್ರಾಚಾರ್ಯ ಬಿ.ಎಂ. ಬೆಳ್ಳಿಯಪ್ಪ, ಉಪನ್ಯಾಸಕಿ ಸಂಧ್ಯಾ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆÀ ಚಿತ್ರ, ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕರು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.