ಮಡಿಕೇರಿ, ಡಿ. 23: ಇಲ್ಲಿನ ದೇಚೂರು, ಚೈನ್‍ಗೇಟ್, ಗೌಡ ಸಮಾಜದ ಕೆಳಭಾಗ, ಖಾಸಗಿ ಬಸ್ ನಿಲ್ದಾಣ, ಜ. ತಿಮ್ಮಯ್ಯ ವೃತ್ತ ಮತ್ತು ಸುದರ್ಶನ ವೃತ್ತ ವ್ಯಾಪ್ತಿಯ ಸುದರ್ಶನ ಗೌಡ ಕೂಟದ 12ನೇ ವಾರ್ಷಿಕ ಸಭೆ ಹಾಗೂ ಸಾಂಸ್ಕøತಿಕ ಸಂತೋಷ ಕೂಟ ತಾ. 25 ರಂದು ಬೆಳಿಗ್ಗೆ 9.30 ಗಂಟೆಗೆ ಕೊಡಗು ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಕೂಟದ ಅಧ್ಯಕ್ಷ ಪಾಣತ್ತಲೆ ಬಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಕೊಂಬಾರನ ಜಿ. ಬೋಪಯ್ಯ, ಅತಿಥಿಗಳಾಗಿ ತೋಟಮನೆ ಮೇದಪ್ಪಗೌಡ ಉಪಸ್ಥಿತರಿರುವರು.

ಇದೇ ಸಂದರ್ಭ ಕೂಟದ ಸದಸ್ಯರು ಹಾಗೂ ಕುಟುಂಬದವರಿಗಾಗಿ ಕ್ರೀಡಾಕೂಟ, ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.