ನಾಪೆÇೀಕ್ಲು, ಡಿ. 23: ಕೊಳಕೇರಿ ಘಟಕದ ಓಲ್ಡ್ ಸ್ಟೂಡೆಂಟ್ಸ್ ಫೆÀಡರೇಷನ್ ವತಿಯಿಂದ ಕೊಳಕೇರಿ ಪಟ್ಟಣದಿಂದ ಕೊಕೇರಿಗೆ ಸಾಗುವ ಎರಡು ಕಿ.ಮೀ. ರಸ್ತೆಯ ಗುಂಡಿ ಮುಚ್ಚುವ ಕಾರ್ಯಕೈಗೊಳ್ಳಲಾಯಿತು.

ಈ ಸಂದರ್ಭ ಮಾತನಾಡಿದ ಕೊಳಕೇರಿ ಜುಮ್ಮಾ ಮಸೀದಿ ಖದೀಬ ವಿ.ಪಿ.ಎಂ. ಕುಟ್ಟಿ ಮಲಹರಿ, ಈ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸಂಚಾರ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಎಲ್ಲರಂತೆ ನಾವು ಪ್ರತಿಭಟನೆ ನಡೆಸುತ್ತಾ ಕಾಲಕಳೆಯುವ ಬದಲು ಗ್ರಾಮದ ಯುವಕರ ಸಹಕಾರದಿಂದ ರಸ್ತೆಯ ಗುಂಡಿ ಮುಚ್ಚುವ ಮೂಲಕ ಎಲ್ಲರಿಗೂ ಒಳಿತು ಮಾಡುವದರೊಂದಿಗೆ ಸರಕಾರದ ಗಮನ ಸೆಳೆಯುವ ಕಾರ್ಯ ಮಾಡಿದ್ದೇವೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಎ.ಕೆ. ಹ್ಯಾರೀಸ್ ಮಾತನಾಡಿ, ಇದು ಜಿಲ್ಲಾ ಪಂಚಾಯಿತಿಗೆ ಸೇರಿದ ರಸ್ತೆಯಾಗಿದೆ. ಆದರೂ ಗ್ರಾಮ ಪಂಚಾಯಿತಿ ವತಿಯಿಂದ ರೂ. 3.75 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ಈ ರಸ್ತೆಯು ವೀರಾಜಪೇಟೆಗೆ ಸಮೀಪದ ಸಂಪರ್ಕ ರಸ್ತೆಯಾಗಿದ್ದು, ಸುಮಾರು ಐದು ಕಿ.ಮೀ. ಕಡಿಮೆಯಾಗಲಿದೆ. ಇದರಿಂದ ಇಂಧನದ ಉಳಿತಾಯ ಆಗಲಿದೆ. ಆದುದರಿಂದ ಸಂಬಂಧಿಸಿದವರು ರಸ್ತೆ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.