ನಾಪೆÉÇೀಕ್ಲು, ಡಿ. 23: ಶ್ರೀ ಕ್ಷೇತ್ರ ತಲಕಾವೇರಿ - ಭಾಗಮಂಡಲ ದೇವಳದ ವ್ಯವಸ್ಥಾಪನಾ ಸಮಿತಿಗೆ ರಾಜ್ಯ ಸರಕಾರ 8 ಮಂದಿ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಈ ಸಮಿತಿಯಲ್ಲಿ ಕೊಡವ ಜನಾಂಗವನ್ನು ನಿರ್ಲಕ್ಷಿಸಿ ಬೇರೆ ಜಿಲ್ಲೆಯ ಕೆಲವರನ್ನು ನೇಮಕ ಮಾಡಿರುವದು ಕೊಡವ ಜನಾಂಗದ ಭಾವನೆಗೆ ಧÀಕ್ಕೆ ಉಂಟು ಮಾಡಿದ್ದು, ನಾಪೆÉÇೀಕ್ಲು ಕೊಡವ ಸಮಾಜ ಖಂಡಿಸುತ್ತದೆ ಎಂದು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಹೇಳಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಮಂಡೀರ, ಮಣವಟ್ಟಿರ ಮತ್ತು ಪಟ್ಟಮಾಡ ಕುಟುಂಬದವರು ದೇವಳದ ತಕ್ಕಮುಖ್ಯಸ್ಥರಾಗಿದ್ದರು. ಆದರೆ ಕಾರಣಾಂತರದಿಂದ ಈಗ ಅವರು ತಕ್ಕಮುಖ್ಯ ಸ್ಥಾನದಿಂದ ದೂರ ವಿದ್ದಾರೆ. ಅವರನ್ನು ವ್ಯವಸ್ಥಾಪನಾ ಸಮಿತಿಯ ಖಾಯಂ ಸದಸ್ಯರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿದರು.

ಕೊಡವ ಸಮಾಜವು ನಾಡಿನ ಆಚಾರ, ವಿಚಾರ, ಪದ್ಧತಿ- ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಈ ಸಮಿತಿಯನ್ನು ವಿಸರ್ಜಿಸದಿದ್ದಲ್ಲಿ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.