ಗೋಣಿಕೊಪ್ಪಲು, ಡಿ. 23: ದ.ಕೊಡಗಿನ ಕುರ್ಚಿ, ವೆಸ್ಟ್‍ನೆಮ್ಮಲೆ, ಬೀರುಗ ಗ್ರಾಮದ ರೈತರ ಭತ್ತದ ಗದ್ದೆ, ಕಾಫಿ ತೋಟಗಳಿಗೆ ನಿರಂತರ ಕಾಡಾನೆ ಯಿಂದ ಧಾಳಿಯಾಗುತ್ತಿರುವ ಬಗ್ಗೆ ರೈತ ಸಂಘದ ಮುಖಂಡರಾದ ಶ್ರೀಮಂಗಲದ ಅಜ್ಜಮಾಡ ಚಂಗಪ್ಪ, ಬಾಚವiಡ ಭವಿಕುಮಾರ್, ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಷ್ಟಗೊಂಡ ರೈತರಿಗೆ ತಕ್ಷಣ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.

ರೈತರು ಬೆಳೆದಿದ್ದ ಭತ್ತ, ಕಾಫಿ, ಅಡಿಕೆ, ತೆಂಗು ಫಸಲನ್ನು ಕಳೆದು ಕೊಂಡಿರುವ ರೈತರು ಭೂಮಿ ಹಾಗೂ ಕಾಫಿ ತೋಟಗಳನ್ನು ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ.ಕಳೆದ 5 ವರ್ಷಗಳಿಂದ ಈ ಗ್ರಾಮದ ರೈತರ ಭೂಮಿ ಹಾಗೂ ಗದ್ದೆಗಳಿಗೆ ವಿಶೇಷವಾಗಿ ಡಿಸಂಬರ್, ಜನವರಿ ತಿಂಗಳಿನಲ್ಲಿ ಲಗ್ಗೆ ಇಡುವ ಕಾಡಾನೆಗಳು ತಾವು ಬೆಳೆದ ಭತ್ತದ ಗದ್ದೆಗಳಿಗೆ ಹಾಗೂ ಕಾಫಿ,ತೆಂಗು,ಅಡಿಕೆ ತೋಟಗಳಿಗೆ ಹಿಂಡು ಹಿಂಡಾಗಿ ಆಗಮಿಸಿ ಬೆಳೆದು ನಿಂತ ಫಸಲನ್ನು ಸಂಪೂರ್ಣ ಹಾಳು ಮಾಡಿ ಕೋಟ್ಯಂತರ ರೂಪಾಯಿ ನಷ್ಟ ಪಡಿಸುತ್ತಿದೆ. ಇದರಿಂದ ವರ್ಷಪೂರ್ತಿ ಸಾಲ ಮಾಡಿ ಬೆಳೆದ ಫಸಲುಗಳು ಕೈ ಸೇರುತ್ತಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಜಿಲ್ಲಾಧಿಕಾರಿಗಳೊಂದಿಗೆ ರೈತರ ನೋವನ್ನು ತೋಡಿಕೊಂಡರು.

ಇಲ್ಲಿಯ ತನಕ ಅರಣ್ಯ ಇಲಾಖೆಯಿಂದ ಈ ಮೂರು ಗ್ರಾಮದಲ್ಲಿ ಆನೆ ಕಂದಕ ನಿರ್ಮಾಣ ಮಾಡಿರುವದಿಲ್ಲ. ಸೋಲಾರ್ ಬೇಲಿ

ಭೂಮಿ ಹಾಗೂ ಗದ್ದೆಗಳಿಗೆ ವಿಶೇಷವಾಗಿ ಡಿಸಂಬರ್, ಜನವರಿ ತಿಂಗಳಿನಲ್ಲಿ ಲಗ್ಗೆ ಇಡುವ ಕಾಡಾನೆಗಳು ತಾವು ಬೆಳೆದ ಭತ್ತದ ಗದ್ದೆಗಳಿಗೆ ಹಾಗೂ ಕಾಫಿ,ತೆಂಗು,ಅಡಿಕೆ ತೋಟಗಳಿಗೆ ಹಿಂಡು ಹಿಂಡಾಗಿ ಆಗಮಿಸಿ ಬೆಳೆದು ನಿಂತ ಫಸಲನ್ನು ಸಂಪೂರ್ಣ ಹಾಳು ಮಾಡಿ ಕೋಟ್ಯಂತರ ರೂಪಾಯಿ ನಷ್ಟ ಪಡಿಸುತ್ತಿದೆ. ಇದರಿಂದ ವರ್ಷಪೂರ್ತಿ ಸಾಲ ಮಾಡಿ ಬೆಳೆದ ಫಸಲುಗಳು ಕೈ ಸೇರುತ್ತಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಜಿಲ್ಲಾಧಿಕಾರಿಗಳೊಂದಿಗೆ ರೈತರ ನೋವನ್ನು ತೋಡಿಕೊಂಡರು.

ಇಲ್ಲಿಯ ತನಕ ಅರಣ್ಯ ಇಲಾಖೆಯಿಂದ ಈ ಮೂರು ಗ್ರಾಮದಲ್ಲಿ ಆನೆ ಕಂದಕ ನಿರ್ಮಾಣ ಮಾಡಿರುವದಿಲ್ಲ. ಸೋಲಾರ್ ಬೇಲಿ