ಗೋಣಿಕೊಪ್ಪ ವರದಿ, ಡಿ. 23: ಪಾಲಿಬೆಟ್ಟ ಚೆಶೈರ್ ಹೋಮ್‍ನ ವಿಶೇಷ ಮಕ್ಕಳು ಕ್ರಿಸ್‍ಮಸ್ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ವಿಶೇಷ ವೇಶಭೂಷಣದಿಂದ ಗಮನ ಸೆಳೆದರು. ಸಂತಕ್ಲಾಸ್‍ನಂತೆ ಉಡುಗೆ ತೊಟ್ಟು ಸಂತಕ್ಲಾಸ್ ನೃತ್ಯಕ್ಕೆ ಹೆಜ್ಜೆ ಹಾಕಿದರು. ಮಕ್ಕಳ ನೃತ್ಯ ಮನಸ್ಸಿಗೆ ಮುದ ನೀಡಿತು. ಸಿಹಿ ಹಂಚಿ ಸಂಭ್ರಮಿಸಿದರು.

ಬ್ರೈಟ್ ಬಿಗಿನಿಂಗ್ ಪ್ಲೇಹೋಮ್‍ನ ವಿದ್ಯಾರ್ಥಿಗಳು ವಿಶೇಷ ಚೇತನ ಮಕ್ಕಳೊಂದಿಗೆ ಕ್ರಿಸ್‍ಮಸ್ ಆಚರಿಸಿಕೊಂಡರು. ಕ್ರಿಸ್‍ಮಸ್ ಕೇಕ್ ಕತ್ತರಿಸಿ ಪ್ಲೇಹೋಮ್‍ನ ವಿದ್ಯಾರ್ಥಿಗಳು ಕ್ರಿಸ್‍ಮಸ್ ಟ್ರಿ ಡ್ಯಾನ್ಸ್, ಕ್ರಿಸ್‍ಮಸ್ ಸ್ಟಾರ್ ಡ್ಯಾನ್ಸ್ ಪ್ರದರ್ಶಿಸಿದರು.

ಈ ಸಂದರ್ಭ ಚೆಶೈರ್ ಹೋಮ್‍ನ ಅಧ್ಯಕ್ಷೆ ಗೀತಾ ಚೆಂಗಪ್ಪ, ಉಪಾಧ್ಯಕ್ಷೆ ಪುನಿತಾ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಪ್ರಾಂಶುಪಾಲ ಶಿವಕುಮಾರ್, ಬ್ರೈಟ್ ಬಿಗಿನಿಂಗ್ ಪ್ಲೇ ಹೋಮ್ ಮುಖ್ಯಸ್ಥೆ ಸೋನಿಯಾ ಉಪಸ್ಥಿತರಿದ್ದರು.