ಮಡಿಕೇರಿ, ಜ. 11: ನಗರಸಭಾ ವ್ಯಾಪ್ತಿಗೊಳಪಡುವ ಎ.ವಿ. ಶಾಲೆ ವ್ಯಾಪ್ತಿಯಲ್ಲಿ ಹುಳು ತುಂಬಿದ ಕುಡಿಯುವ ನೀರು ನಲ್ಲಿ ಮೂಲಕ ಸರಬರಾಜಾಗಿದೆ. ಇದರಿಂದ ಈ ಭಾಗದ ನಿವಾಸಿಗಳು ಆತಂಕಗೊಂಡಿದ್ದು, ಅಲ್ವಿನ್ ಎಂಬವರು ಹುಳು ತುಂಬಿದ ನೀರಿನ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ್ದು, ನಗರಸಭೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರಸಭೆ ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.