ಸೋಮವಾರಪೇಟೆ, ಜ. 11: ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‍ನ ವಿಜ್ಞಾನ ಶಿಕ್ಷಣ ಕಾರ್ಯಕ್ರಮಕ್ಕಾಗಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಸೋಮವಾರಪೇಟೆ ರೋಟರಿ ಸಂಸ್ಥೆಗೆ ಒದಗಿಸಿದ ವಿಜ್ಞಾನವಾಹಿನಿ ವಾಹನಕ್ಕೆ ಚಾಲನೆ ನೀಡಲಾಯಿತು. ರೋಟರಿ ಮಾಜಿ ಉಪ ರಾಜ್ಯಪಾಲ ಬಿ.ಎಸ್. ಸದಾನಂದ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ ಒಟ್ಟು 3 ವಾಹನಗಳನ್ನು ಒದಗಿಸಿದ್ದು 1 ಸೊಮವಾರಪೇಟೆಗೆ ಲಭ್ಯವಾಗಿದೆ. ಗ್ರಾಮೀಣ ಭಾಗದ ಶಾಲೆಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯ ಸಹಿತ ಶಿಕ್ಷಣ ನೀಡಲಿದೆ ಎಂದರು. ಈ ಸಂದರ್ಭ ರೋಟರಿ ಸಂಸ್ಥೆ ಅಧ್ಯಕ್ಷ ಡಾ.ರಾಕೇಶ್ ಪಟೆಲ್, ಕಾರ್ಯದರ್ಶಿ ಪ್ರಕಾಶ್, ಸದಸ್ಯರುಗಳಾದ ಬಿ.ಎನ್. ಶ್ರೀಧರ್, ಎ.ಪಿ. ವೀರರಾಜು ಇದ್ದರು.