ಮಡಿಕೇರಿ, ಜ. 11: ಕೇರಳದ ಮಲಪ್ಪುರಂನ ಧಾರ್ಮಿಕ ವಿದ್ಯಾಕೇಂದ್ರ ಜಾಮಿಯ ನೂರಿಯ್ಯ ಅರೆಬಿಕ್ ಕಾಲೇಜಿನ ಮಹಾ ಸಮ್ಮೇಳನದ ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ತಾ. 13 ರಿಂದ 15 ರವರೆಗೆ ವಾಹನ ಪ್ರಚಾರ ಯಾತ್ರೆ ಮತ್ತು ಪ್ರಚಾರ ಸಮ್ಮೇಳನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಫೈಝಿಸ್ ಒಕ್ಕೂಟದ ಪದಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದರು. ತಾ. 17 ರಿಂದ 21 ರವರೆಗೆ ಪಟ್ಟಿಕಾಡ್ನಲ್ಲಿ ಜಾಮಿಯ ನೂರಿಯ್ಯ ಅರೆಬಿಕ್ ಕಾಲೆÉೀಜಿನ 55ನೇ ವಾರ್ಷಿಕ ಮತ್ತು 53ನೇ ಬಿರುದು ದಾನ ಮಹಾ ಸಮ್ಮೇಳನ ನಡೆಯಲಿದೆ. ಇದರ ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ಪ್ರÀಚಾರ ಕಾರ್ಯ ಮತ್ತು ಸಮ್ಮೇಳನ ಹಮ್ಮಿಕೊಂಡಿರುವದಾಗಿ ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಬಡ ಅನಾಥ ಮತ್ತು ನಿರ್ಗತಿಕ ಕುಟುಂಬಗಳಿಗೆ ಜಾಮಿಯಾ ನೂರಿಯ್ಯಾ ಅರೆಬಿಕ್ ಕಾಲೆÉೀಜಿನ ಬಗ್ಗೆ ಮಾಹಿತಿಯನ್ನು ನೀಡುವ ಉದ್ದೇಶದಿಂದ ವಾಹನ ಪ್ರಚಾರ ಯಾತ್ರೆ ನಡೆಯಲಿದೆ. ಈ ಪ್ರಚಾರ ಯಾತ್ರೆಗೆ ತಾ. 13 ರಂದು ಬೆಳಿಗ್ಗೆ 11 ಗಂಟೆಗೆ ಎಮ್ಮೆಮಾಡಿನ ಹಝ್ರತ್ ಸೂಫಿ ಶಹೀದ್ ದರ್ಗಾ ಝಿಯಾರತ್ನಲ್ಲಿ ಚಾಲನೆಯನ್ನು ನೀಡಲಾಗುತ್ತದೆ. ಪ್ರಚಾರದ ಕೊನೆಯ ದಿನವಾದ ತಾ. 15 ರಂದು ಸಂಜೆ 6 ಗಂಟೆಗೆ ಕುಶಾಲನಗರದ ದಾರುಲ್ ಉಲೂಂ ಶಾದಿಮಹಲ್ನಲ್ಲಿ ಸಮಾರೋಪ ಸಮ್ಮೇಳನ ನಡೆಯಲಿದೆಯೆಂದು ತಿಳಿಸಿದರು.
ಸಮಾರೋಪ ಸಮ್ಮೇಳನ ಕೊಡಗು ಜಿಲ್ಲಾ ಫೈಝಿಸ್ ಒಕ್ಕೂಟ ಮತ್ತು ಕುಶಾಲನಗರದ ಎಸ್ಕೆ ಎಸ್ಎಸ್ಎಫ್ ಶಾಖೆಯ ಜಂಟಿ ಆಶ್ರಯದಲ್ಲಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಸಮಸ್ತ ಸಹಾಯಕ ಖಾಝಿಗಳಾದ ಎಂ.ಎಂ. ಅಬ್ದುಲ್ಲ ಫೈಝಿ ವಹಿಸಲಿದ್ದಾರೆ. ಸಮ್ಮೇಳನವನ್ನು ಮುಹಿಯುದ್ದೀನ್ ಫೈಝಿ ಉದ್ಘಾಟಿಸಲಿದ್ದಾರೆ. ಬಹು ಅಬ್ದುಸ್ಸಲಾಂ ಫೈಝಿ ಮುಖ್ಯ ಭಾಷಣ ಮಾಡಲಿದ್ದಾರೆ. ಎಸ್ಕೆಎಸ್ಎಸ್ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರಿಫ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಅಸ್ಸಯ್ಯದ್ ಎಂ.ಪಿ.ಎಂ. ಶರ್ಫುದ್ದೀನ್ ತಙ್ಞಳ್ ಅಲ್ ಹಾದಿ ರಬ್ಬಾನಿ ಅವರು ದ್ಸಿಕ್ರ್ ದುವಾ ಮಜ್ಲಿಸಿಗೆ ನೇತೃತ್ವ ವಹಿಸಲಿದ್ದಾರೆಂದು ತಿಳಿಸಿದರು.
ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಫೈಝಿಸ್ ಒಕ್ಕೂಟದ ಉಪಾಧ್ಯಕ್ಷರಾದ ಎ.ಸಿ. ಉಸ್ಮಾನ್ ಫೈಝಿ, ಕೋಶಾಧಿಕಾರಿ ವೈ.ಎಂ. ಉಮರ್ ಫೈಝಿ, ಕಾರ್ಯದರ್ಶಿ ಎಂ.ವೈ. ಅಶ್ರಫ್ ಫೈಝಿ, ಸದಸ್ಯರುಗಳಾದ ಪಿ.ಎಂ. ಆರಿಫ್ ಫೈಝಿ, ಹಮೀದ್ ಫೈಝಿ ಮತ್ತು ಉನೈಸ್ ಫೈಝಿ ಉಪಸ್ಥಿತರಿದ್ದರು.