*ಗೋಣಿಕೊಪ್ಪ, ಜ. 11: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಭಾಗಮಂಡಲದ ಜೇನು ಕೃಷಿ ತರಬೇತಿ ಕೇಂದ್ರದಲ್ಲಿ ವಿಶೇಷ ಶಿಬಿರ ನಡೆಯಿತು.
ಪೊನ್ನಂಪೇಟೆ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಬೋಧಸ್ವರೂಪನಂದಜೀ ಮಹಾರಾಜ್ ಶಿಬಿರಕ್ಕೆ ಚಾಲನೆ ನೀಡಿದರು. ಗುಜರಾತ್ ರಾಮಕೃಷ್ಣ ಆಶ್ರಮದ ನಿಕಟಪೂರ್ವ ಅಧ್ಯಕ್ಷ ಸರ್ವಸ್ಥಾನಂಜೀ ಮಾತನಾಡಿ, ಕದಿಯಲಾಗದ ಕಣಜ ಶಿಕ್ಷಣ ಇದನ್ನು ಪ್ರಕೃತಿಯ ಜೊತೆಗೊಡಿ ಕಲಿತರೆ ವಿದ್ಯಾರ್ಥಿಗಳಿಗೆ ಭೂಷಣ ಎಂದು ಹೇಳಿದರು.
ಅರಣ್ಯ ಮಹಾವಿದ್ಯಾಲಯದ ನೈಸರ್ಗಿಕ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ ದೇವಗಿರಿ ಯವರು ವಿಚಾರ ಮಂಡಿಸಿದರು.
ಸಹಾಯಕ ಪ್ರಾಧ್ಯಾಪಕರು ಹಾಗೂ ಶಿಬಿರಾಧಿಕಾರಿಗಳಾಗಿರುವ ಡಿ. ರವಿ ಕುಮಾರ್ ಹಾಗೂ ಸಹಶಿಬಿರಾಧಿಕಾರಿ ಮಧುಸೂದನ್ ರೆಡ್ಡಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ರಾಗಿರುವ ಡಾ. ಚಂದ್ರಶೇಖರ್, ಜೇನು ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿಗಳು, ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.