ನಾಪೋಕ್ಲು, ಇತಿಹಾಸದಲ್ಲಿ ಕಂಡು ಬಂದಂತೆ ತಲಕಾವೇರಿ ಕ್ಷೇತ್ರದಲ್ಲಿ ಮಣವಟ್ಟೀರ, ಮಂಡೀರ ಹಾಗೂ ಪಟ್ಟಮಾಡ ಕುಟುಂಬಸ್ಥರು, ತಕ್ಕ ಮುಖ್ಯಸ್ಥರಾಗಿದ್ದು, ಅಮ್ಮಕೊಡವ ಪೂಜೆ ಸಲ್ಲಿಸುತ್ತಿದ್ದು, ಇದೀಗ ಬದಲಾದ ಸನ್ನಿವೇಶದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಲು ಕೊಡಗು ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ರೋಜಿ ಚಿಣ್ಣಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲು ಒತ್ತಾಯಿಸಿದರು. ಗೋಷ್ಠಿ ಯಲ್ಲಿ ಕಂಗಾಂಡ ರಾಜು ಮೊಣ್ಣಪ್ಪ ಇದ್ದರು.