ಮಡಿಕೇರಿ, ಜ. 12: ಮೈಸೂರಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಇಂಟರ್ಯಾಕ್ಟ್ ಸಮಾವೇಶ ಅಂಬಾರಿಯಲ್ಲಿ ಮಡಿಕೇರಿ ಮಿಸ್ಟಿ ಹಿಲ್ಸ್ ಪ್ರಾಯೋಜಿತ ಎರಡು ಇಂಟರ್ಯಾಕ್ಟ್ ಕ್ಲಬ್ಗಳು ಗಮನಾರ್ಹ ಸಾಧನೆ ತೋರಿದೆ.
ನಾಪೆÇೀಕ್ಲು ಶ್ರೀ ರಾಮಟ್ರಸ್ಟ್ ನ ಇಂಟರ್ಯಾಕ್ಟ್ ಕ್ಲಬ್ ಇಂಟರ್ ನ್ಯಾಷನಲ್ ಸರ್ವೀಸ್ಗಾಗಿ ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ, ಸಾಂಸ್ಕøತಿಕ ಸ್ಪರ್ಧೆಯಲ್ಲಿ ಸಮಧಾನಕರ ಬಹುಮಾನ ತನ್ನದಾಗಿಸಿಕೊಂಡಿದೆ.
ಈ ವರ್ಷ ಮಿಸ್ಟಿ ಹಿಲ್ಸ್ ಪ್ರಾರಂಭಿಸಿದ್ದ ನಾಪೆÇೀಕ್ಲು ಸರ್ಕಾರಿ ಹೈಸ್ಕೂಲ್ ಇಂಟರ್ಯಾಕ್ಟ್ ಕ್ಲಬ್ ತಂಡವು ರೋಟರಿ ಜಿಲ್ಲಾಮಟ್ಟದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದೆ.
ರೋಟರಿ ಜಿಲ್ಲೆ 3181 ನಿಂದ 38 ಇಂಟರ್ಯಾಕ್ಟ್ ಕ್ಲಬ್ಗಳು ಪಾಲ್ಗೊಂಡಿದ್ದ ಸಮಾವೇಶದಲ್ಲಿ 645 ಇಂಟರ್ಯಾಕ್ಟ್ ಸದಸ್ಯರು ಭಾಗವಹಿಸಿದ್ದರು. ಮಿಸ್ಟಿ ಹಿಲ್ಸ್ನಿಂದ ಈ ವರ್ಷ 42 ಇಂಟರ್ಯಾಕ್ಟ್ ಸದಸ್ಯರು ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ಮಿಸ್ಟಿ ಹಿಲ್ಸ್ನ ಇಂಟರ್ಯಾಕ್ಟ್ ಸಮಿತಿ ಅಧ್ಯಕ್ಷ ಕುಲ್ಲೇಟಿರ ಅಜಿತ್ ನಾಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.