ಮಡಿಕೇರಿ, ಜ. 12: ಕೇರಳದ ಕಣ್ಣೂರು ಬಳಿ ಉಳಿಕ್ಕಲ್‍ನಲ್ಲಿರುವ ಶ್ರೀ ಆದಿ ಬೈತೂರಪ್ಪ ದೇವರ ವಾರ್ಷಿಕ ಉತ್ಸವಕ್ಕೆ ತಾ. 13 ರಂದು (ಇಂದು) ಚಾಲನೆ ದೊರೆಯಲಿದೆ. ಕೊಡಗಿನ ದೇವಣಗೇರಿಯ ಪುಗ್ಗೇರ ಕುಟುಂಬಸ್ಥರ ತಕ್ಕಾಮೆಯಲ್ಲಿ ತಾ. 22 ರಿಂದ 26ರ ತನಕ ದೇವತಾ ಕೈಂಕರ್ಯ ನಡೆಯಲಿದ್ದು, ಮೊದಲನೆಯ ದಿನವೇ ಅಲ್ಲಿ ನೂತನವಾಗಿ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಿರುವ ವಸತಿ ನಿಲಯದ ಉದ್ಘಾಟನೆಯು ಜರುಗಲಿದೆ.
ಶತ ಶತಮಾನಗಳ ಇತಿಹಾಸವಿರುವ ಶ್ರೀ ಬೈತೂರಪ್ಪ ದೇವಸ್ಥಾನವು ಕೇರಳ ಸರಕಾರದ ಮಲಬಾರ್ ದೇವಸ್ವಂ ಮಂಡಳಿ ಅಧೀನದಲ್ಲಿ ನಿರ್ವಹಿ¸ Àಲ್ಪಡುತ್ತಿದ್ದು, ಕೊಡಗಿನ ಪುಗ್ಗೇರ ಕುಟುಂಬಸ್ಥರು ಕೂಡ ಇಲ್ಲಿ ಅನಾದಿ ಕಾಲದಿಂದ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವದು ವಿಶೇಷ. ಐದು ಮಂದಿ ಸದಸ್ಯರನ್ನು ಒಳಗೊಂಡಿರುವ ಮಂಡಳಿಯಲ್ಲಿ ಕೇರಳದ ಮೂವರು ಹಾಗೂ ಪುಗ್ಗೇರ ಕುಟುಂಬದ ಇಬ್ಬರು ಇದ್ದಾರೆ.
ದೇವಾಲಯದ ವಾರ್ಷಿಕೋತ್ಸವ ಮತ್ತು ಇತರ ಸಂದರ್ಭಗಳಲ್ಲಿ ಕೊಡಗಿನ ದೇವಾಲಯಕ್ಕೆ ತೆರಳುವ ಭಕ್ತರಿಗಾಗಿ ಸದ್ಭಕ್ತರಿಂದ ಸಂಗ್ರಹಿಸಿರುವ ರೂ. 48 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸಭಾಭವನ (ವಸತಿ) ನಿರ್ಮಿ¸ Àಲಾಗಿದ್ದು, ತಾ. 22 ರಂದು ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹಾಗೂ ಗಣ್ಯರ ಸಮ್ಮುಖದಲ್ಲಿ ನೆರವೇರಿ¸ Àಲಾಗುವದು ಎಂದು ತಕ್ಕರಾದ ಪುಗ್ಗೇರ ಟಿ. ಅಯ್ಯಪ್ಪ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುಗ್ಗೇರ ರಂಜಿ ದೇವಯ್ಯ ಮತ್ತು ದೇವಾಲಯ ಅಧ್ಯಕ್ಷ ಪಿ.ಎ. ಪೊನ್ನಪ್ಪ ತಿಳಿಸಿದ್ದಾರೆ.
ವಿಶೇಷವಾಗಿ ಕೊಡಗಿನ ಭಕ್ತ ಜನತೆ ಪುಗ್ಗೇರ ಕುಟುಂಬದ ನೇತೃತ್ವದಲ್ಲಿ ತಾ. 22 ರಂದು ಎತ್ತು ಪೋರಾಟ ಸಹಿತ ಭಾಗವಹಿಸಲಿದ್ದು, ತಾ. 24 ರಂದು ವಾರ್ಷಿಕ ದೊಡ್ಡಹಬ್ಬ ನೆರವೇರಲಿದೆ. ಅಂದು ನೂತನ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ ಸೇರಿದಂತೆ ವಿವಿಧ ಮುಖಂಡರು, ದಾನಿಗಳು ಪಾಲ್ಗೊಳ್ಳುವರು ಎಂದು ಪುಗ್ಗೇರ ಕುಟುಂಬಸ್ಥರು ತಿಳಿಸಿದ್ದಾರೆ.
ವಾರ್ಷಿಕೋತ್ಸವ ಪ್ರಯುಕ್ತ ತಾ. 22 ರಂದು ಬೆಳಿಗ್ಗೆ 9 ಗಂಟೆಗೆ ಪುಗ್ಗೇರ ಕುಟುಂಬದ ಎತ್ತು ಪೋರಾಟ ದೊಂದಿಗೆ ದೇವರಿಗೆ ನೈವೇಧ್ಯ ಸಮರ್ಪಿಸಿ ಆ ಬಳಿಕ ಮಹಾಪೂಜೆ ನೆರವೇರಿಸಲಾಗುತ್ತದೆ. ತಾ. 23 ರಂದು ಸಮಸ್ತ ನಾಡಿನ ಎತ್ತು ಪೋರಾಟ, ವಿಶೇಷ ಪೂಜೆಗಳು ನೆರವೇರಲಿದೆ. ರಾತ್ರಿ ವಿಶೇಷ ಪೂಜೆ, ಬೇಟೆ ಕುರುಮದಲ್ಲಿ ಈಡುಗಾಯಿ ಸೇವೆ, ನಂದಾದೀಪ ಬೆಳಗಲಾಗುತ್ತದೆ. ತಾ. 24 ರಂದು ಶ್ರೀ ಆದಿ ಬೈತೂರಪ್ಪ ವಾರ್ಷಿಕೋತ್ಸವದೊಂದಿಗೆ ಕೊಡಗು ಹಾಗೂ ಕೇರಳದ ಸದ್ಭಕ್ತರೊಡಗೂಡಿ ವಿಶೇಷ ಪೂಜಾದಿಗಳು, ಆನೆ ಅಂಬಾರಿ ಸಹಿತ ಭಗವಂತನಿಗೆ ಸೇವೆ ನಡೆಯಲಿದೆ. ಅಂದು ರಾತ್ರಿ ಉಳಿಕಲ್‍ನಿಂದ ತಾಲೆಪುರಿ ಮೆರವಣಿಗೆ ವಿಶೇಷ. ತಾ. 25 ರಂದು ದೈವದರ್ಶನ, ಅಭಿಷೇಕ, ಮಧ್ಯಾಹ್ನ ನೃತ್ಯಸೇವೆ ಇತ್ಯಾದಿ ಬಳಿಕ ತಾ. 26 ರಂದು ಮಹೋತ್ಸವಕ್ಕೆ ತೆರಬೀಳಲಿದೆ.
ಕೊಡಗು - ಕೇರಳ ನಡುವೆ ಸಹಸ್ರಮಾನಗಳಿಂದ ದೈವಿಕ ನೆಲೆಯಲ್ಲಿ ಅವಿನಾಭಾವ ಸಂಬಂಧ ಕಲ್ಪಿಸಿರುವ ಶೀ ಬೈತೂರಪ್ಪ ದೇವರ ವಾರ್ಷಿಕೋತ್ಸವ ಮತ್ತು ಪೂಜಾ ಕೈಂಕರ್ಯ ವೈಶಿಷ್ಟ್ಯತೆ ಕಲ್ಪಿಸಿದೆ.