ಮಡಿಕೇರಿ, ಜ.13 : ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಜಾತಿಯ ವಿಷ ಬೀಜ ಬಿತ್ತುವ ಮೂಲಕ ಯುವಜನತೆಯ ಹಾದಿ ತಪ್ಪಿಸುವ ಕಾರ್ಯ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಮತ್ತು ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಾತ್ಯತೀತ ಜನತಾದಳದ ಯುವ ಘಟಕ ಮುಂದಾಗಿದೆ ಎಂದು ಯುವ ಜೆಡಿಎಸ್ ಮಡಿಕೇರಿ ನಗರಾಧ್ಯಕ್ಷ ಎನ್.ರವಿ ಕಿರಣ್ ರೈ ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡಿದರೆ ಸಮಾಜದಲ್ಲಿನ ಶಾಂತಿ ಕದಡುತ್ತದೆಯೇ ಹೊರತು ಯಾವದೇ ರಾಜಕೀಯ ಲಾಭವಾಗಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟರು. ಈ ಹಿಂದಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಇತ್ತು. ಆದರೆ, ಇತ್ತೀಚಿನ ವರ್ಷಗಳ ಕ್ಷುಲ್ಲಕ ರಾಜಕಾರಣದಿಂದಾಗಿ ಶಾಲಾ ಕಾಲೆÉೀಜುಗಳಲ್ಲಿ ಕೂಡ ಗುಂಪುಗಾರಿಕೆ ಕಂಡು ಬಂದಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವ ಜನತೆ ಎಚ್ಚೆತ್ತುಕೊಳ್ಳುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಮೂಡಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಜೆಡಿಎಸ್ ಯುವ ಘಟಕ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದೆ ಎಂದು ರವಿ ಕಿರಣ್ ತಿಳಿಸಿದರು.

ಮಡಿಕೇರಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಯಾವದೇ ವೈಜ್ಞಾನಿಕ ರೂಪವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು ನಗರದ ಸಮಸ್ಯೆಗಳ ಬಗ್ಗೆ ಯುವ ಜೆಡಿಎಸ್ ಧ್ವನಿ ಎತ್ತಲಿದೆ ಎಂದರು. ಯುವ ಸಬಲೀಕರಣಕ್ಕಾಗಿ ಪಕ್ಷದ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ತಾ. 14 ರಂದು (ಇಂದು) ನಗರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ. ನಗರದ ನೆಹರು ಮಂಟಪದ ಆವರಣದಲ್ಲಿ ಯುವ ಜೆಡಿಎಸ್ ವತಿಯಿಂದ ನಡೆಯುವ ಸ್ವಚ್ಛತಾ ಶ್ರಮದಾನದಲ್ಲಿ ಸಾರ್ವಜನಿಕರು ಕೂಡ ಪಾಲ್ಗೊಳ್ಳಬಹುದೆಂದು ರವಿ ಕಿರಣ್ ತಿಳಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಾಗೂ ಪಕ್ಷದ ಮುಖಂಡರು ಅಭಿಯಾನದ ಸಂದರ್ಭ ಹಾಜರಿರುವರು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎ.ಜೀವಿಜಯ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಂಕೇತ್ ಪೂವಯ್ಯ ಅವರನ್ನು ಗೆಲ್ಲಿಸುವದೆ ಯುವ ಜೆಡಿಎಸ್ ಗುರಿಯೆಂದು ರವಿ ಕಿರಣ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಯುವ ಜೆಡಿಎಸ್ ಮಡಿಕೇರಿ ಘಟಕದ ಪ್ರಧಾನ ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ, ಸಹ ಕಾರ್ಯದರ್ಶಿ ರಿಯಾಜ್ ರಹೀಂ, ಕಾರ್ಯಕಾರಿ ಸಮಿತಿ ಸದಸ್ಯ ವಿಲ್ಫ್ರೆಡ್ ಹಾಗೂ ತಾಲೂಕು ಯುವ ಜೆಡಿಎಸ್