ಸಿದ್ದಾಪುರ, ಜ. 12: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಕೆಸವಿನಕೆರೆ ಸೇರಿದಂತೆ 7 ಹಾಡಿಗಳಿಗೆ ಸರ್ಕಾರ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಕಡೆಗಣಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಹಾಡಿಯ ನಿವಾಸಿಗಳು ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸವಿನಕೆರೆ ಹಾಡಿಯ ನೂರಾರು ಮಂದಿ ಸಭೆ ಸೇರಿ ಈ ಭಾಗದ ಹಾಡಿಯ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು, ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಂಪರ್ಕವಿಲ್ಲದೆ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ, ಜಿಲ್ಲಾಡಳಿತದ ನೀತಿಯನ್ನು ಖಂಡಿಸಿ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಿ ಕೊಡದಿದ್ದಲ್ಲಿ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ಒಕ್ಕೊರಲಿನಿಂದ ನಿರ್ಧಾರ ಕೈಗೊಂಡರು.
ಇದೇ ಸಂದರ್ಭ ಮಾತನಾಡಿದ ಆದಿವಾಸಿಗಳ ಸಂಘಟನೆಯ ಮುಖಂಡ ವೈ.ಕೆ. ರಾಮ, ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಸವಿನಕೆರೆ ಹಾಡಿ ಸೇರಿದಂತೆ 7 ಹಾಡಿಗಳಿದ್ದು, ಈ ಭಾಗದ ಮಂದಿ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ. ಈ ಹಾಡಿಯ ನಿವಾಸಿಗಳು ಹಲವಾರು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಜಿಲ್ಲಾಡಳಿತಕ್ಕೆ ಮನವಿ ಪತ್ರ ನೀಡಿದ್ದರೂ ಕೂಡ ಮೂಲಭೂತ ಸೌಕರ್ಯಗಳು ಒದಗಿಸಿ ಕೊಡದೇ ಜಿಲ್ಲಾಡಳಿತ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿ ದ್ದಾರೆ ಎಂದು ಆರೋಪಿಸಿದರು. ಆದಿವಾಸಿಗಳು ಅರಣ್ಯದಂಚಿನಲ್ಲಿ ತಲಾತಲಾಂತರ ಗಳಿಂದ ವಾಸ ಮಾಡಿಕೊಂಡಿದ್ದರೂ ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಕೊಡುವಲ್ಲಿ ಜಿಲ್ಲಾಡಳಿತ ವಿಫಲ ಗೊಂಡಿದೆ ಎಂದು ದೂರಿದರು.
ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದರೂ ಸರ್ಕಾರ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು, ಹಾಡಿಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಹಾಡಿಗಳಲ್ಲಿ ರಸ್ತೆಗಳು ದುರಸ್ತಿಪಡಿಸದೇ ಇರುವ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗೆ ತೆರಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆಂದರು.
ಗಿರಿಜನರ ಓಟಿಗಾಗಿ ರಾಜಕಾರಣಿಗಳು ಬರುತ್ತಾರೆ ನಂತರ ಇತ್ತ ಸುಳಿಯುತ್ತಿಲ್ಲ ಎಂದ ರಾಮ ಚೆನ್ನಂಗಿಯಲ್ಲಿರುವ ಸರ್ಕಾರಿ ಶಾಲೆಯ ಸುತ್ತಲೂ ಕಾಡು ಪ್ರಾಣಿಗಳ ಉಪಟಳ ತೀವ್ರವಾಗಿದ್ದು, ಶಾಲೆಯ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ರೇಷ್ಮೆ ಹಾಡಿ ನಿವಾಸಿ ಮಲ್ಲಪ್ಪ ಮಾತನಾಡಿ ಗ್ರಾಮ ಪಂಚಾಯಿತಿಯ ಅಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಕೆಸವಿನಕೆರೆ ಹಾಡಿ ಎಲ್ಲಿದೆ ಎಂಬ ಮಾಹಿತಿ ಕೂಡ ಇಲ್ಲದಂತೆ ವರ್ತಿಸುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಚುನಾವಣೆ ಸಂದರ್ಭ ಬರುವ ಜನಪ್ರತಿನಿಧಿಗಳು ನಂತರ ಹಾಡಿ ಯನ್ನು ಮರೆತು ರಾಜಕೀಯದಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆಂದು ದೂರಿದರು. ಜನಪ್ರತಿನಿಧಿಗಳ, ಜಿಲ್ಲಾಡಳಿತ, ಹಾಗೂ ಪಂಚಾಯಿತಿ ಅಧಿಕಾರಿಯವರ ನಿರ್ಲಕ್ಷ್ಯತನವನ್ನು ಖಂಡಿಸಿ ಹಾಡಿಗಳಿಗೆ ಮೂಲಭೂತ ಸೌಕರ್ಯ ಗಳನ್ನು ಕೂಡಲೇ ಒದಗಿಸಿಕೋಡ ಬೇಕೆಂದು ಒತ್ತಾಯಿಸಿ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಕಚೇರಿಯ ಎದುರು ಅಹೋರಾತ್ರಿ ಧರಣಿ ಮುಷ್ಕರ ಹಮ್ಮಿಕೊಳ್ಳಲಾಗುವ ದೆಂದು ಎಚ್ಚರಿಕೆ ನೀಡಿದರು. ಅಲ್ಲದೇ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವದೆಂದರು.
ಹಾಡಿಯ ನಿವಾಸಿ ಹಾಗೂ ಚೆನ್ನಂಗಿ ಸರ್ಕಾರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕಾವೇರಿ ಮಾತನಾಡಿ, ಅರಣ್ಯದಂಚಿನಲ್ಲಿರುವ ಹಾಡಿಗಳ ರಸ್ತೆಗಳು ಹದಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಈ ಭಾಗದಿಂದ ಶಾಲಾ, ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ತೊಂದರೆಯಾಗಿದೆ. ವಾಹನ ಸೌಲಭ್ಯಗಳು ಇಲ್ಲದೇ ಕಾಡು ಪ್ರಾಣಿಗಳ ಉಪಟಳದಿಂದಾಗಿ ಭಯದಲ್ಲೇ ಶಾಲೆಗಳಿಗೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು. ಹಾಡಿಯಲ್ಲಿ ರಸ್ತೆ, ನೀರಿನ ಸೌಲಭ್ಯ ಹಾಗೂ ಹಾಡಿ ನಿವಾಸಿಗಳ ಮನೆಗಳನ್ನು ದುರಸ್ತಿ ಪಡಿಸಿಕೊಡುವಂತೆ ಒತ್ತಾಯಿಸಿದರು.
ಹಾಡಿಯ ನಿವಾಸಿ ಮಲ್ಲ ಮಾತನಾಡಿ ತಲಾತಲಾಂತರಗಳಿಂದ ನಾವು ನಮ್ಮ ಮುತ್ತಜ್ಜರು ಕಾಡಿನಲ್ಲಿ ವಾಸವಿದ್ದು ಕಾಡುಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುತ್ತೇವೆ. ಅರಣ್ಯ ಪ್ರದೇಶದಲ್ಲಿ ನೆಡುತೋಪು ಮೂಲಕ ಕೆಲಸಕ್ಕೆ ಬಂದ ನಾವುಗಳು ಕಾಡಿನಲ್ಲಿ ಕೆಲಸ ಮಾಡಿಕೊಂಡು ಹಾಡಿಯಲ್ಲಿ ಜೀವನ ಮಾಡುತ್ತಾ ಬಂದಿದ್ದೇವೆ. ವಿದ್ಯುತ್ ಸಂಪರ್ಕವಿಲ್ಲದೆ ಸಂಕಷ್ಟದಲ್ಲಿದ್ದೇವೆ. ಈ ಬಗ್ಗೆ ವಿದ್ಯುತ್ ಇಲಾಖೆಯವರ ಬಳಿ ವಿಚಾರಿಸಿದರೆ ಅವರು ಅರಣ್ಯ ಇಲಾಖಾಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದು, ಅರಣ್ಯ ಇಲಾಖಾಧಿಕಾರಿಗಳ ಬಳಿ ವಿಚಾರಿಸಿದರೆ ಅವರು ವಿದ್ಯುತ್ ಇಲಾಖೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಹಾಡಿಯ ನಿವಾಸಿಗಳು ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯ ಗಳಿಂದ ವಂಚಿತರಾಗಿದ್ದಾರೆಂದು ತಿಳಿಸಿದರು. ಎಲ್ಲಾ ಇಲಾಖಾ ಧಿಕಾರಿಗಳು ಹಾಡಿಗಳನ್ನು ನಿರ್ಲಕ್ಷ್ಯಿ ಸುತ್ತಿದ್ದು, ಐ.ಟಿ.ಡಿ.ಪಿ. ಇಲಾಖಾಧಿ ಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಡಿ ನಿವಾಸಿಗಳು ಸಮಸ್ಯೆಗಳ ಬಗ್ಗೆ ಅರ್ಜಿ ಬಾಗಿಲು ಅಳವಡಿಸದೆ ಇರುವ ಶೌಚಾಲಯಸಿದ್ದಾಪುರ, ಜ. 12: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಕೆಸವಿನಕೆರೆ ಸೇರಿದಂತೆ 7 ಹಾಡಿಗಳಿಗೆ ಸರ್ಕಾರ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಕಡೆಗಣಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಹಾಡಿಯ ನಿವಾಸಿಗಳು ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸವಿನಕೆರೆ ಹಾಡಿಯ ನೂರಾರು ಮಂದಿ ಸಭೆ ಸೇರಿ ಈ ಭಾಗದ ಹಾಡಿಯ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು, ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಂಪರ್ಕವಿಲ್ಲದೆ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ, ಜಿಲ್ಲಾಡಳಿತದ ನೀತಿಯನ್ನು ಖಂಡಿಸಿ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಿ ಕೊಡದಿದ್ದಲ್ಲಿ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ಒಕ್ಕೊರಲಿನಿಂದ ನಿರ್ಧಾರ ಕೈಗೊಂಡರು.
ಇದೇ ಸಂದರ್ಭ ಮಾತನಾಡಿದ ಆದಿವಾಸಿಗಳ ಸಂಘಟನೆಯ ಮುಖಂಡ ವೈ.ಕೆ. ರಾಮ, ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಸವಿನಕೆರೆ ಹಾಡಿ ಸೇರಿದಂತೆ 7 ಹಾಡಿಗಳಿದ್ದು, ಈ ಭಾಗದ ಮಂದಿ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ. ಈ ಹಾಡಿಯ ನಿವಾಸಿಗಳು ಹಲವಾರು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಜಿಲ್ಲಾಡಳಿತಕ್ಕೆ ಮನವಿ ಪತ್ರ ನೀಡಿದ್ದರೂ ಕೂಡ ಮೂಲಭೂತ ಸೌಕರ್ಯಗಳು ಒದಗಿಸಿ ಕೊಡದೇ ಜಿಲ್ಲಾಡಳಿತ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿ ದ್ದಾರೆ ಎಂದು ಆರೋಪಿಸಿದರು. ಆದಿವಾಸಿಗಳು ಅರಣ್ಯದಂಚಿನಲ್ಲಿ ತಲಾತಲಾಂತರ ಗಳಿಂದ ವಾಸ ಮಾಡಿಕೊಂಡಿದ್ದರೂ ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಕೊಡುವಲ್ಲಿ ಜಿಲ್ಲಾಡಳಿತ ವಿಫಲ ಗೊಂಡಿದೆ ಎಂದು ದೂರಿದರು.
ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದರೂ ಸರ್ಕಾರ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು, ಹಾಡಿಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಹಾಡಿಗಳಲ್ಲಿ ರಸ್ತೆಗಳು ದುರಸ್ತಿಪಡಿಸದೇ ಇರುವ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗೆ ತೆರಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆಂದರು.
ಗಿರಿಜನರ ಓಟಿಗಾಗಿ ರಾಜಕಾರಣಿಗಳು ಬರುತ್ತಾರೆ ನಂತರ ಇತ್ತ ಸುಳಿಯುತ್ತಿಲ್ಲ ಎಂದ ರಾಮ ಚೆನ್ನಂಗಿಯಲ್ಲಿರುವ ಸರ್ಕಾರಿ ಶಾಲೆಯ ಸುತ್ತಲೂ ಕಾಡು ಪ್ರಾಣಿಗಳ ಉಪಟಳ ತೀವ್ರವಾಗಿದ್ದು, ಶಾಲೆಯ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ರೇಷ್ಮೆ ಹಾಡಿ ನಿವಾಸಿ ಮಲ್ಲಪ್ಪ ಮಾತನಾಡಿ ಗ್ರಾಮ ಪಂಚಾಯಿತಿಯ ಅಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಕೆಸವಿನಕೆರೆ ಹಾಡಿ ಎಲ್ಲಿದೆ ಎಂಬ ಮಾಹಿತಿ ಕೂಡ ಇಲ್ಲದಂತೆ ವರ್ತಿಸುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಚುನಾವಣೆ ಸಂದರ್ಭ ಬರುವ ಜನಪ್ರತಿನಿಧಿಗಳು ನಂತರ ಹಾಡಿ ಯನ್ನು ಮರೆತು ರಾಜಕೀಯದಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆಂದು ದೂರಿದರು. ಜನಪ್ರತಿನಿಧಿಗಳ, ಜಿಲ್ಲಾಡಳಿತ, ಹಾಗೂ ಪಂಚಾಯಿತಿ ಅಧಿಕಾರಿಯವರ ನಿರ್ಲಕ್ಷ್ಯತನವನ್ನು ಖಂಡಿಸಿ ಹಾಡಿಗಳಿಗೆ ಮೂಲಭೂತ ಸೌಕರ್ಯ ಗಳನ್ನು ಕೂಡಲೇ ಒದಗಿಸಿಕೋಡ ಬೇಕೆಂದು ಒತ್ತಾಯಿಸಿ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಕಚೇರಿಯ ಎದುರು ಅಹೋರಾತ್ರಿ ಧರಣಿ ಮುಷ್ಕರ ಹಮ್ಮಿಕೊಳ್ಳಲಾಗುವ ದೆಂದು ಎಚ್ಚರಿಕೆ ನೀಡಿದರು. ಅಲ್ಲದೇ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವದೆಂದರು.
ಹಾಡಿಯ ನಿವಾಸಿ ಹಾಗೂ ಚೆನ್ನಂಗಿ ಸರ್ಕಾರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕಾವೇರಿ ಮಾತನಾಡಿ, ಅರಣ್ಯದಂಚಿನಲ್ಲಿರುವ ಹಾಡಿಗಳ ರಸ್ತೆಗಳು ಹದಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಈ ಭಾಗದಿಂದ ಶಾಲಾ, ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ತೊಂದರೆಯಾಗಿದೆ. ವಾಹನ ಸೌಲಭ್ಯಗಳು ಇಲ್ಲದೇ ಕಾಡು ಪ್ರಾಣಿಗಳ ಉಪಟಳದಿಂದಾಗಿ ಭಯದಲ್ಲೇ ಶಾಲೆಗಳಿಗೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು. ಹಾಡಿಯಲ್ಲಿ ರಸ್ತೆ, ನೀರಿನ ಸೌಲಭ್ಯ ಹಾಗೂ ಹಾಡಿ ನಿವಾಸಿಗಳ ಮನೆಗಳನ್ನು ದುರಸ್ತಿ ಪಡಿಸಿಕೊಡುವಂತೆ ಒತ್ತಾಯಿಸಿದರು.
ಹಾಡಿಯ ನಿವಾಸಿ ಮಲ್ಲ ಮಾತನಾಡಿ ತಲಾತಲಾಂತರಗಳಿಂದ ನಾವು ನಮ್ಮ ಮುತ್ತಜ್ಜರು ಕಾಡಿನಲ್ಲಿ ವಾಸವಿದ್ದು ಕಾಡುಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುತ್ತೇವೆ. ಅರಣ್ಯ ಪ್ರದೇಶದಲ್ಲಿ ನೆಡುತೋಪು ಮೂಲಕ ಕೆಲಸಕ್ಕೆ ಬಂದ ನಾವುಗಳು ಕಾಡಿನಲ್ಲಿ ಕೆಲಸ ಮಾಡಿಕೊಂಡು ಹಾಡಿಯಲ್ಲಿ ಜೀವನ ಮಾಡುತ್ತಾ ಬಂದಿದ್ದೇವೆ. ವಿದ್ಯುತ್ ಸಂಪರ್ಕವಿಲ್ಲದೆ ಸಂಕಷ್ಟದಲ್ಲಿದ್ದೇವೆ. ಈ ಬಗ್ಗೆ ವಿದ್ಯುತ್ ಇಲಾಖೆಯವರ ಬಳಿ ವಿಚಾರಿಸಿದರೆ ಅವರು ಅರಣ್ಯ ಇಲಾಖಾಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದು, ಅರಣ್ಯ ಇಲಾಖಾಧಿಕಾರಿಗಳ ಬಳಿ ವಿಚಾರಿಸಿದರೆ ಅವರು ವಿದ್ಯುತ್ ಇಲಾಖೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಹಾಡಿಯ ನಿವಾಸಿಗಳು ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯ ಗಳಿಂದ ವಂಚಿತರಾಗಿದ್ದಾರೆಂದು ತಿಳಿಸಿದರು. ಎಲ್ಲಾ ಇಲಾಖಾ ಧಿಕಾರಿಗಳು ಹಾಡಿಗಳನ್ನು ನಿರ್ಲಕ್ಷ್ಯಿ ಸುತ್ತಿದ್ದು, ಐ.ಟಿ.ಡಿ.ಪಿ. ಇಲಾಖಾಧಿ ಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಡಿ ನಿವಾಸಿಗಳು ಸಮಸ್ಯೆಗಳ ಬಗ್ಗೆ ಅರ್ಜಿ ನೀಡಿದಲ್ಲಿ ಆ ಬಗ್ಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿದರು. ಸರ್ಕಾರವು ಆದಿವಾಸಿಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ನೀಡುತ್ತಿದ್ದು ಹಾಗೂ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದರೂ ಈ ಎಲ್ಲಾ ಅನುದಾನಗಳು ಹಾಗೂ ಸೌಲಭ್ಯಗಳು ಎಲ್ಲಿಗೆ ಹೋಗುತ್ತಿದೆ ಎಂದು ಮಲ್ಲ ಪ್ರಶ್ನಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಹಾಗೂ ಆಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಾಡಿಗಳ ನಿವಾಸಿಗಳು ಸೇರಿ ಪಂಚಾಯಿತಿಗೆ ಮುತ್ತಿಗೆ ಹಾಕಲಾ ಗುವದೆಂದು ಎಚ್ಚರಿಕೆ ನೀಡಿದರು.
- ವಾಸು, ಸಿದ್ದಾಪುರ