ಸಿದ್ದಾಪುರ, ರಿ. 13: ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಈರ್ವರ ವಿರುದ್ದ ಪ್ರಕರಣ ದಾಖಲಾಗಿರುವ ಘಟನೆ ಸಮೀಪದ ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ.
ಅಲ್ಲಿನ ನಿವಾಸಿಗಳಾದ ಪ್ರವೀಣ್ ಹಾಗೂ ದಿನೇಶ್ (ದೊರೆ) ತ್ಯಾಗತ್ತೂರು ಗ್ರಾಮದ ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿರುವ ಖಚಿತ ಸುಳಿವಿನ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ರೇಷ್ಮ ನೇತೃತ್ವದ ತಂಡ ಧಾಳಿ ನಡೆಸಿ, ಸಾಗಾಟಕ್ಕೆ ಸಿದ್ದಪಡಿಸಿದ್ದ ಮರಳು ಹಾಗೂ ಮರಳು ತೆಗೆಯಲು ಬಳಸಿದ್ದ 2 ದೋಣಿಗಳನ್ನು ವಶಪಡಿಸಿಕೊಂಡು ಪೊಲೀಸರಿಗೊಪ್ಪಿಸಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಠಾಣಾ ಎ.ಎಸ್.ಐ ವಸಂತ್ ಕುಮಾರ್ ಹಾಗೂ ಸಿಬ್ಬಂದಿಗಳು ತೆರಳಿ, ಮೊಕದ್ದಮೆ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.