ಮಡಿಕೇರಿ, ಜ. 13: ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಆರಂಭಿಸಿರುವ ಕಾಂಗ್ರೆಸ್ ನಡಿಗೆ ಮನೆ ಮನೆ ಕಡೆಗೆ ಅಭಿಯಾನ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಚುರುಕುಗೊಂಡಿದೆ.

ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಪಕ್ಷದ ಪ್ರಮುಖರು ಸರಕಾರದ ಸಾಧನೆಯ ಕೈಪಿಡಿಗಳನ್ನು ಗ್ರಾಮಸ್ಥರಿಗೆ ನೀಡಿದರು. ಕಾಂಗ್ರೆಸ್ ಸರಕಾರ ಜನಸಾಮಾನ್ಯರ ಪರವಾದ ಹಲವು ಭಾಗ್ಯಗಳನ್ನು ಅನುಷ್ಠಾನಗೊಳಿಸಿ ಜನಪರ ಸರಕಾರ ಎನ್ನುವ ಹೆಗ್ಗಳಿಕೆಯನ್ನು ಪಡೆದಿದ್ದು, ಗ್ರಾಮಸ್ಥರು ಇದನ್ನು ಗಮನಿಸ ಬೇಕೆಂದು ವೀಣಾ ಅಚ್ಚಯ್ಯ ಹೇಳಿದರು.

ಗ್ರಾ.ಪಂ. ಸದಸ್ಯರಾದ ಜಾನ್ಸನ್ ಪಿಂಟೊ, ಹೆಚ್.ಆರ್. ಕುಮಾರ್, ಕರ್ಣಂಗೇರಿ ಗ್ರಾಮದ ಪ್ರಮುಖರಾದ ತಂಗಚ್ಚನ್, ಬಸಪ್ಪ, ಪ್ರತಾಪ್, ಮೊಯಿದು, ಪಿ.ಆರ್. ಡ್ಯಾನಿ, ವಿಜಯಕುಮಾರ್, ಶರೀಫ್, ರವಿ, ಇಬ್ರಾಹಿಂ, ಸಲೀಂ, ಗಣೇಶ, ವಿಕಾಸ್, ಅಜೀóಜ್, ಮೊಯ್ದೀನ್ ಅಬ್ದುಲ್ಲಾ, ರವಿ, ಕಾರ್ಯಕರ್ತರು ಹಾಗೂ ಐಎನ್‍ಟಿಯುಸಿ ಕಾರ್ಯಕರ್ತರು ಮನೆ ಮನೆ ಭೇಟಿ ಸಂದರ್ಭ ಹಾಜರಿದ್ದರು.