ಸಿದ್ದಾಪುರ, ಜ. 13: ಒಂದೂವರೆ ತಿಂಗಳ ಹಿಂದೆ ಒಂಟಿ ಸಲಗದ ಧಾಳಿಗೆ ಸಿಲುಕಿ ಗಾಯಗೊಂಡಿರುವ ಮಾಲ್ದಾರೆ ಆಸ್ಥಾನ ಹಾಡಿಯ ನಿವಾಸಿ ಬಿ.ಕೆ. ವಿಶ್ವನಾಥ್ ಅವರನ್ನು ಭೇಟಿ ಮಾಡಿ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ವೈಯಕ್ತಿಕವಾಗಿ 10 ಸಾವಿರ ಪರಿಹಾರ ಧನ ನೀಡಿದರು. ವಿಶ್ವನಾಥ್ ಅವರ ಚಿಕಿತ್ಸೆಗೆ ಹೆಚ್ಚಿನ ಅನುದಾನದ ಅವಶ್ಯಕತೆಯಿದ್ದು, ಅರಣ್ಯ ಇಲಾಖೆ ಪರಿಹಾರ ನೀಡದಿದ್ದಲ್ಲಿ ಜೆಡಿಎಸ್‍ನಿಂದ ಹೋರಾಟ ಮಾಡುವದಾಗಿ ಸಂಕೇತ್ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್, ಚೆನ್ನಯ್ಯನಕೋಟೆಯ ಸ್ಥಾನೀಯ ಅಧ್ಯಕ್ಷ ದೇವರಾಜ್, ಪಕ್ಷದ ಪದಾಧಿಕಾರಿಗಳಾದ ಜಿ.ಬಿ. ಸೋಮಯ್ಯ, ಎಂ.ಕೆ. ರಘುನಂದನ್, ಕೆ.ಆರ್. ಪ್ರಥು, ಪ್ರಜ್ವಲ್ ಹಾಗೂ ಇತರರು ಹಾಜರಿದ್ದರು.