ಮಡಿಕೇರಿ, ಜ. 12: ಹುಣಸೂರಿನಲ್ಲಿ ಜರುಗಿದ ರೋಟರಿ ವಲಯ ಮಟ್ಟದ ಪ್ರತಿಭಾ ಸಂಗಮ ಸಾಂಸ್ಕøತಿಕ ಸ್ಪರ್ಧೆಯಲ್ಲಿ 10 ಬಹುಮಾನಗಳನ್ನು ಪಡೆಯುವ ಮೂಲಕ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.

ಹುಣಸೂರು ರೋಟರಿ ಕ್ಲಬ್ ಆಯೋಜಿಸಿದ್ದ ವಲಯ ಮಟ್ಟದ ರೋಟರಿ ಕ್ಲಬ್‍ಗಳಿಗಾಗಿನ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ರೋಟರಿ ಮಿಸ್ಟಿ ಹಿಲ್ಸ್‍ನ 25 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಮಿಸ್ಟಿ ಹಿಲ್ಸ್‍ನ ನಾರಾಯಣ ರಾವ್ ಮತ್ತು ವಿಜಯಲಕ್ಷ್ಮಿ ಚೇತನ್ ಸೋಲೋ ಸಾಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗ್ರೂಪ್ ಡಾನ್ಸ್ ವಿಭಾಗದಲ್ಲಿ ಮಿಸ್ಟಿ ಹಿಲ್ಸ್ ತಂಡ ಕೊಡವ ಜೀವನ ಶೈಲಿಯ ವೈಭವ ಸಾರುವ ನೃತ್ಯ ಪ್ರದರ್ಶಿಸಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು.

ಪ್ರಮೋದ್ ರೈ ಮತ್ತು ಶಮಿಕ್ ರೈ ಡ್ಯುಯೆಟ್ ಸಾಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರೆ, ರೋಟರಿ ಮಿಸ್ಟಿ ಹಿಲ್ಸ್ ತಂಡ ಗ್ರೂಪ್ ಸಾಂಗ್‍ನಲ್ಲಿ ತೃತೀಯ ಸ್ಥಾನ ಪಡೆಯಿತು. ಅಪೇಕ್ಷಾ ರೈ ನಿರ್ದೇಶನದಲ್ಲಿ ಮೊಬೈಲ್ ದುರಂತಗಳ ಬಗ್ಗೆ ಮನಮುಟ್ಟುವಂತೆ ಪ್ರದರ್ಶಿತಗೊಂಡ ಮೈಮ್‍ನಲ್ಲಿ ಮಿಸ್ಟಿ ಹಿಲ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಹರ್ಷಿತಾ ಮುರಳಿ ಸೋಲೋ ಡಾನ್ಸ್‍ನಲ್ಲಿ ಪ್ರಥಮ ಮತ್ತು ಅಪೇಕ್ಷಾ ರೈ ಸೋಲೋ ಡಾನ್ಸ್‍ನಲ್ಲಿ ತೃತೀಯ ಸ್ಥಾನ ಪಡೆದರು. ಆರ್ಯ ರಾಜೇಶ್ ಸೋಲೋ ಸಾಂಗ್ ವಿಭಾಗದಲ್ಲಿ ಪ್ರಥಮ ಮತ್ತು ಶಮಿಕ್ ರೈ ದ್ವಿತೀಯ ಸ್ಥಾನ ಪಡೆದರು. ಒಟ್ಟು 10 ಬಹುಮಾನಗಳನ್ನು ಪಡೆಯುವ ಮೂಲಕ ಪ್ರತಿಭಾ ಸಂಗಮ ಸ್ಪರ್ಧೆಯಲ್ಲಿ ಅತ್ಯಧಿಕ ಬಹುಮಾನಗಳೊಂದಿಗೆ ಮಿಸ್ಟಿ ಹಿಲ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು ಎಂದು ಅನಿಲ್ ತಿಳಿಸಿದ್ದಾರೆ.

ನಮಿತಾ ರೈ, ಶಫಾಲಿ ರೈ, ರೂಪಾ ಸುಮಂತ್, ಶುಭಾ ರಾಜೇಶ್, ರಶ್ಮಿ ಪ್ರವೀಣ್, ಶಮ್ಮಿ ಮೋಹನ್ ಪ್ರಭು, ಸಂಧ್ಯಾ ಅಶೋಕ್, ಪ್ರಿಯ ಜಗದೀಶ್, ಸಿಂಚನಾ ವಿನೋದ್, ಡಿ.ಎಂ. ತಿಲಕ್, ಪಿ.ಎಂ. ಸಂದೀಪ್, ರತ್ನಾಕರ್ ರೈ, ರಾಜೇಶ್ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮಿಸ್ಟಿ ಹಿಲ್ಸ್ ತಂಡ ಬಹುಮಾನ ಗಳಿಸುವಲ್ಲಿ ಕಾರಣರಾದರು.

ರೋಟರಿ ವಲಯ 6 ರ ಅಸಿಸ್ಟೆಂಟ್ ಗವರ್ನರ್ ಮಹೇಶ್ ನಲ್ಡಾಡೆ, ಮುಂದಿನ ಸಾಲಿನ ಜಿಲ್ಲಾ ಸೆಕ್ರಟರಿ ಕ್ಸೆಜ್ವಲ್ ಕೋಟ್ಸ್, ಈ ಸಾಲಿನ ಜಿಲ್ಲಾ ಸಾರ್ಜೆಂಟ್ ಎಟ್ ಆಮ್ರ್ಸ್ ದೇವಣಿರ ತಿಲಕ್, ಹುಣಸೂರು ರೋಟರಿ ಅಧ್ಯಕ್ಷ ಅನಂತರಾಜೇ ಅರಸ್, ಕಾರ್ಯದರ್ಶಿ ಪುಟ್ಟಶೆಟ್ಟಿ, ಮುಂದಿನ ಸಾಲಿನ ಅಸಿಸ್ಟೆಂಟ್ ಗವರ್ನರ್ ನಾರಾಯಣ್ ಬಹುಮಾನ ವಿತರಿಸಿದರು.