ಮಡಿಕೇರಿ, ಜ. 12: ಭಾಗಮಂಡಲ ಹೋಬಳಿ ವ್ಯಾಪ್ತಿಯ ಜನರ ಮಳೆಗಾಲದ ಬವಣೆ ಹಾಗೂ ಭಾಗಮಂಡಲಕ್ಕೆ ಬರುವ ಯಾತ್ರಾರ್ಥಿಗಳ ವಾಹನಗಳ ಸುಗಮ ಸಂಚಾರಕ್ಕೆ ಇದೀಗ ಸರಕಾರ ರೂಪಿಸಿರುವ ಮೇಲ್ಸೇತುವೆ ಒಂದು ಹೆಮ್ಮೆಯ ಯೋಜನೆಯಾಗಿದ್ದು, ಇದು ಶ್ಲಾಘನೀಯ ಎಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಅಭಿಪ್ರಾಯಪಟ್ಟಿದೆ.
ಸಮಿತಿ ಅಧ್ಯಕ್ಷ ಬಿ.ಎಸ್. ರಮಾನಾಥ್ ನೀಡಿರುವ ಹೇಳಿಕೆಯಲ್ಲಿ ಈ ಯೋಜನೆಯು ದೀರ್ಘಕಾಲಿಕ ದೃಷ್ಟಿಯಿಂದ ಒಂದು ದೊಡ್ಡ ಕೊಡುಗೆಯಾಗಿದ್ದು, ಮಳೆಗಾಲದ ತೊಂದರೆಗೆ ಪರಿಹಾರ ಒದಗಿಸಿದಂತಾಗುತ್ತದೆ ಎಂದು ಯೋಜನೆಯನ್ನು ಸ್ವಾಗತಿಸಿದ್ದಾರೆ. ಎಮ್ಮೆಮಾಡು ದರ್ಗಾಕ್ಕೂ ದೊಡ್ಡ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದು, ಎಲ್ಲ ಜನರಿಗೂ ಸರ್ವಋತು ಸಂಪರ್ಕ ಕಲ್ಪಿಸಲು ಈ ಮೇಲ್ಸೇತುವೆ ಸಹಕಾರಿಯಾಗುತ್ತದೆ ಎಂದು ವಿವರಿಸಿದ್ದಾರೆ.