ವೀರಾಜಪೇಟೆ, ಜ. 13: ಆರೋಗ್ಯ ಇಲಾಖೆ ಮೂಲಕ ಕುಟ್ಟಂದಿ ಬೇಟೋಳಿ ಉಪಕೇಂದ್ರ ರಾಮನಗರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ತಾಯಿ ಹಾಗೂ ಶಿಶುಗಳ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಆರೋಗ್ಯವಂತ ತಾಯಿ ಹಾಗೂ ಮಗುವಿಗೆ ಬಹುಮಾನ ನೀಡಲಾಯಿತು. ಮಾಫಿತ (ಪ್ರಥಮ), ಸುಬ್ರಮಣಿ (ದ್ವಿತೀಯ), ಪ್ರತೀಕ (ತೃತೀಯ) ಬಹುಮಾನ ಪಡೆದು ಕೊಂಡಿದ್ದಾರೆ. ಈ ಸಂದರ್ಭ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಆರ್. ಮಾಯಮ್ಮ ಉಪಸ್ಥಿತರಿದ್ದರು.