ಸುಂಟಿಕೊಪ್ಪ, ಜ. 12: ಲಯನ್ಸ್ ಸಂಸ್ಥೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದು ಇದೀಗ ಲಯನ್ಸ್‍ನ ಪ್ರತಿ ಸದಸ್ಯರುಗಳು ರೂ. 750 ದೇಣಿಗೆ ನೀಡುವ ಮೂಲಕ ಹಸಿವಿನಿಂದ ಬಳಲುತ್ತಿರುವ ಮಕ್ಕಳಿಗೆ ನೆರವು ನೀಡಬೇಕು ಎಂದು ಲಯನ್ಸ್ ವಲಯ ಅಧ್ಯಕ್ಷ ಸೋಮಣ್ಣ ಕರೆ ನೀಡಿದರು.
ಸುಂಟಿಕೊಪ್ಪ ಲಯನ್ಸ್ ಕ್ಲಬ್‍ಗೆ ಭೇಟಿ ನೀಡಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆ ವಿಶಾಲ ದೃಷ್ಟಿಕೋನದಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ನದೇ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದೆ. ಹಸಿವು ಮುಕ್ತ ರಾಷ್ಟ್ರವಾಗಲು ನಮ್ಮ ಸಂಸ್ಥೆಯ ಸದಸ್ಯರುಗಳು ರೂ. 750 ದೇಣಿಗೆ ನೀಡುವ ಮೂಲಕ ಹಸಿವಿನಿಂದ ಬಳಲುತ್ತಿರುವ ಪುಟ್ಟ ಮಕ್ಕಳಿಗೆ ಸಹಾಯಹಸ್ತ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಚೆಟ್ಟಿಮಾಡ ಕೆ. ರಕ್ಷಿತ್ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಶಶಿಕಾಂತ್, ಖಜಾಂಚಿ ಕೆ.ಪಿ. ಜಗನ್ನಾಥ್, ಕನ್ನಿಕಾ ರಕ್ಷಿತ್ ಉಪಸ್ಥಿತರಿದ್ದರು.
ವಿಜಯ¯ಕ್ಷ್ಮೀ ಶ್ರೀನಿವಾಸ್ ಪ್ರಾರ್ಥಿಸಿ, ಸಿ.ಕೆ. ರಕ್ಷಿತ್ ಸ್ವಾಗತಿಸಿ, ಶಶಿಕಾಂತ್ ವರದಿ ವಾಚಿಸಿ, ವಂದಿಸಿದರು.