ಮಡಿಕೇರಿ, ಜ.20 : ಎಸ್‍ವೈಎಸ್ ಮತ್ತು ಎಸ್‍ಕೆಎಸ್‍ಎಸ್‍ಎಫ್‍ನ ಎಮ್ಮೆಮಾಡು ಶಾಖೆಯ ವತಿಯಿಂದ ತಾ.22 ರಂದು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‍ನ ನೂತನ ಕಛೇರಿಯ ಉದ್ಘಾಟನೆ ಹಾಗೂ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಕಾರ್ಯಕ್ರಮ ನಡೆಯಲಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘಟನೆಗಳ ಪ್ರಮುಖರು ತಾ.22 ರಂದು ಸಂಜೆ 4 ಗಂಟೆಗೆಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಎಮ್ಮೆಮಾಡುವಿನ ಶಂಸುಲ್ ಉಲಮಾ ನಗರದಲ್ಲಿ ಕಛೇರಿಯನ್ನು ಪಾಣಕಾಡ್ ಸಯ್ಯದ್ ಸಾಬಿಕಲಿ ಶಿಹಾಬ್ ತಂಞಳ್ ಉದ್ಘಾಟಿಸಲಿದ್ದಾರೆ. 4.30ಕ್ಕೆ ಇತಿಹಾಸ ಪ್ರಸಿದ್ಧ ಸೂಫಿ ಶಹೀದ್ ಅವರು ಮಖಾಂ ಝಿಯಾರತ್ ಎಮ್ಮೆಮಾಡುವಿನ ಸೈಯದ್ ಕೋಯಮ್ಮ ತಂಞಳ್ ಅಲ್‍ಹೈದ್ರೋಸಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಜೆ 5 ಗಂಟೆಗೆ ನೂತನ ಕಛೇರಿ ಉದ್ಘಾಟನೆಯಾಗಲಿದ್ದು, ಮಜ್ಲಿಸುನ್ನೂರ್ ಆಧ್ಯಾತ್ಮಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೊಡಗಿನ ಸಮಸ್ತ ಉಪಖಾಝಿ ಶೈಖುನಾ ಎಂ.ಎಂ. ಅಬ್ದುಲ್ಲಾ ಫೈಜಿ ಅವರ ನೇತೃತ್ವದಲ್ಲಿ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಭೆ ನಡೆಯಲಿದ್ದು, ನಂತರ ಎಸ್.ಕೆ.ಎಸ್.ಎಸ್‍ಎಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ. ಆರಿಫ್ ಪೈಜಿ ಮತ್ತು ಕೊಡಗು ಜಿಲ್ಲಾ ಸಮಸ್ತ ಉಲಮಾ ಒಕ್ಕೂಟ ಸಹಾ ಕಾರ್ಯದರ್ಶಿ ಎಂ.ವೈ ಅಶ್ರಫ್ ಫೈಜಿ “ಸಮಸ್ತ ನಡೆದು ಬಂದು ಹಾದಿ” ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ.

ಸಮಾರೋಪ ಸಮಾರಂಭ ಸಂಜೆ 6 ಗಂಟೆಗೆ ನಡೆಯಲಿದ್ದು, ಪಾನಕಾಡ್ ಸಯ್ಯದ್ ಸಾಬಿಕಲಿ ಶಿಹಾಬ್ ತಂಞಳ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುಂಟಿಕೊಪ್ಪದ ಮಹಮ್ಮದ್ ಅಲಿ ಶಿಹಾಬ್ ತಂಞಳ್, ಜೂನಿಯರ್ ಶರೀಹತ್ ಕಾಲೇಜಿನ ವ್ಯವಸ್ಥಾಪಕರು ಹಾಗೂ ಮಾಜಿ ಶಾಸಕರು, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಯ ಕೆ.ಎಂ. ಇಬ್ರಾಹಿಂ ಮಾಸ್ಟರ್ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಪತ್ತನಾಪುರಂನ ಖ್ಯಾತ ಅಂತರ್ರಾಷ್ಟ್ರೀಯ ಪ್ರಭಾಷಕ ಪ್ರೌಡೋಜ್ಜಲ ವಾಗ್ಮಿ ಉಸ್ತಾದ್ ಅಲ್‍ಹಾಪಿಳ್ ಸಿರಾಜುದ್ದೀನ್ ಆಲ್ ಖಾಸಿಮಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿ.ಪಿ. ಎಸ್. ಜಿಫ್ರಿ ಮುತ್ತುಕ್ಕೋಯ ತಂಞಳ್, ಜೆ.ಎಂ.ಸಿ.ಸಿ ಕೇಂದ್ರದ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ.ಎ. ಯಾಕೂಬ್, ಬಜೆಗುಂಡಿ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮಾಜಿ ಅಧ್ಯಕ್ಷರಾದ ಎಸ್.ಎ. ಹುಸೇನ್, ಕದ್ದಣಿಯಂಡ ಹರೀಶ್ ಬೋಪಣ್ಣ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಕೊಡಗು ಜಿಲ್ಲಾವಕ್ಫ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹಮಾನ್, ಎಸ್.ವೈ.ಎಸ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೈ.ಎಂ. ಉಮ್ಮರ್ ಫೈಜಿ, ಎಸ್.ಕೆ.ಎಸ್.ಎಸ್.ಎಫ್‍ನ ಕೊಡಗು ಜಿಲ್ಲಾ ಅಧ್ಯಕ್ಷ ವೈ. ಯು ನೌಶಾದ್ ಫೈಜಿ, ಎಸ್.ಕೆ.ಜೆ.ಯು ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲಿಯಾರ್, ಶಂಸುಲ್ ಉಲಾಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಸಿ.ಪಿ.ಎಂ ಬಶೀರ್ ಹಾಜಿ, ನಾಪೋಕ್ಲು ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಹಾಗೂ ನಾಪೋಕ್ಲುವಿನ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಮುಖರು ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಎಮ್ಮೆಮಾಡು ಶಾಖೆಯ ಎಸ್.ವೈ.ಎಸ್‍ನ ಗೌರವಾಧ್ಯಕ್ಷರಾದ ಸಿ.ಎ. ಮಾಹಿನ್, ಅಧ್ಯಕ್ಷರಾದ ಸಿ.ಯು. ಇಬ್ರಾಹಿಂ ಹಾಜಿ, ಸದಸ್ಯರಾದ ಪಿ.ಎ. ಆಲಿ ಕುಟ್ಟಿ, ಎಸ್.ಕೆ.ಎಸ್.ಎಸ್.ಎಫ್‍ನ ಅಧ್ಯಕ್ಷರಾದ ಎಂ.ಹೆಚ್. ಜಾಫರ್, ಪ್ರಧಾನ ಕಾರ್ಯ ದರ್ಶಿಯಾದ ಕೆ.ಎಂ.ಮನ್ಸೂರ್ ಹಾಗೂ ಸದಸ್ಯರಾದ ಎನ್.ಎ.ರಜಾóಕ್ ಉಪಸ್ಥಿತರಿದ್ದರು.