ಮಡಿಕೇರಿ, ಜ. 20: ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ಅಶೋಕ್‍ಕುಮಾರ್ ಗಾರ್ಗ್ ಅವರು ತಾ. 21ರಂದು (ಇಂದು) ಮಡಿಕೇರಿಗೆ ಆಗಮಿಸಿಲಿದ್ದಾರೆ. ಮಡಿಕೇರಿ ವೃತ್ತದಲ್ಲಿನರಣ್ಯ ಕಾಮಗಾರಿಗಳ ಕುರಿತಂತೆ ಎಲ್ಲ ಅರಣ್ಯಾಧಿಕಾರಿ ಗಳೊಂದಿಗೆ ಚರ್ಚಿಸಿ ಕ್ಷೇತ್ರ ತಪಾಸಣೆ ನಡೆಸಲಿದ್ದಾರೆ. ತಾ. 22ರಂದು (ನಾಳೆ) ಕುಶಾಲನಗರ ಸನಿಹದ ಬೊಳ್ಳೂರು ಗ್ರಾಮದ 125 ಬಡ ಕುಟುಂಬಗಳು ಹಾಗೂ ಹಾರಂಗಿ ನಿರಾಶ್ರಿತರಿಗೆ ಹಕ್ಕುಪತ್ರ ವಿತರಣೆ ಕೊಡಗರಹಳ್ಳಿ ಅಕ್ರಮ ಗಣಿಗಾರಿಕೆ ಸ್ಥಳ ವೀಕ್ಷಣೆ ಮಾಡಲಿದ್ದಾರೆ.