ಗೋಣಿಕೊಪ್ಪ ವರದಿ, ಜ. 20: ಕೊಡವ ಭಾಷಿಕ ಸಮುದಾಯವಾದ ಕೊಡವ ಸವಿತ ಜನಾಂಗದವರನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಯಾವದೇ ಸ್ಥಾನಮಾನ ನೀಡದೆ ಕಡೆಗಣಿಸಲಾಗುತ್ತಿದೆ ಎಂದು ಕೊಡವ ಹಜಾಮ ಜನಾಂಗ ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಾಜದ ಪ್ರಮುಖ ವೇದಪಂಡ ಬಿ. ಕಿರಣ್, ಜನಾಂಗದವರನ್ನು ಹಲವು ವರ್ಷಗಳಿಂದ ಕಡೆಗಣಿಸಿಕೊಂಡು ಬರಲಾಗುತ್ತಿದೆ. ಅಕಾಡೆಮಿಯಲ್ಲಿ ಸದಸ್ಯತ್ವ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.