ಮಡಿಕೇರಿ, ಜ. 19: ಕೇರಳ ಸರಕಾರದ ಒತ್ತಡಕ್ಕೆ ಸಿಲುಕಿರುವ ಹಿಂದಿನ ಯುಪಿಎ ಸರಕಾರ 2012-13ರಲ್ಲಿ ತಲಚೇರಿ - ಕೊಡಗು ಮೂಲಕ ಪಿರಿಯಾಪಟ್ಟಣಕ್ಕೆ ರೈಲ್ವೇ ಯೋಜನೆ ರೂಪಿಸಿದ್ದು, ಕರ್ನಾಟಕ ರಾಜ್ಯ ಸರಕಾರ ಯೋಜನೆಯನ್ನು ಬೆಂಬಲಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಿಂದ 2015ರ ಮುಂಗಡಪತ್ರದಲ್ಲಿ ಮೈಸೂರು, ಹುಣಸೂರು, ಪಿರಿಯಾಪಟ್ಟಣ ಮೂಲಕ ಕುಶಾಲನಗರಕ್ಕೆ ಮಾತ್ರ ರೈಲ್ವೇ ಯೋಜನೆಗೆ ತಾನು ಒಪ್ಪಿಗೆ ಸೂಚಿಸಿರುವದಾಗಿಯೂ ಅವರು ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದ್ದಾರೆ.

2012-13ರಲ್ಲಿ ತಲಚೇರಿಯಿಂದ ದಕ್ಷಿಣ ಕೊಡಗಿನ ಮೂಲಕ ಪಿರಿಯಾಪಟ್ಟಣಕ್ಕೆ ರೈಲ್ವೇ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಯೊಂದಿಗೆ ಯುಪಿಎ ಸರಕಾರ ರೂ. 6500 ಕೋಟಿ ವೆಚ್ಚದ ರೈಲ್ವೇ ಮಾರ್ಗ ಗುರುತಿಸುವಿಕೆಗೆ ಟೆಂಡರ್ ಪ್ರಕ್ರಿಯೆ ನಡೆಸಿದ್ದಾಗಿ ಬೊಟ್ಟುಮಾಡಿರುವ ಅವರು, ಈ ಬಾಬ್ತು ರಾಜ್ಯ ಸರಕಾರ ಶೇ. 50 ಪಾಲು ಹಣದೊಂದಿಗೆ ಜಾಗ ನೀಡಲು ಒಡಂಬಡಿಕೆ ಮಾಡಿಕೊಂಡಿದ್ದಾಗಿ ವಿವರಿಸಿದ್ದಾರೆ. ಅಲ್ಲದೆ, ಕೇರಳ ರಾಜ್ಯ ರೈಲ್ವೇ ಅಭಿವೃದ್ಧಿ ಕಾರ್ಪೋರೇಷನ್ ಕಂಪನಿಗೆ (ಕೆಆರ್‍ಡಿಸಿಎಲ್) ಮಾರ್ಗ ಸರ್ವೆಗೆ ಉಭಯ ರಾಜ್ಯಗಳು ಒಡಂಬಡಿಕೆ ಮಾಡಿಕೊಂಡಿದ್ದೇಕೆ? ಎಂದು ಸಂಸದರು ಪ್ರಶ್ನಿಸಿದ್ದು, ತೆರೆಮರೆಯಲ್ಲಿ ಎಲ್ಲವನ್ನು ಮಾಡಿಕೊಂಡು ಜನರನ್ನು ದಾರಿ ತಪ್ಪಿಸಲು ಕೇಂದ್ರಕ್ಕೆ ಬೆರಳು ತೋರಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ತಾನು ವಿಷಯ ಗಮನಕ್ಕೆ ಬಂದಿರುವ ಬೆನ್ನಲ್ಲೇ ಕೇಂದ್ರ ರೈಲ್ವೇ ಸಚಿವರ ಗಮನ ಸೆಳೆದು ತಲಚೇರಿ- ಕೊಡಗಿನ ಮೂಲಕ ರೈಲು ಸಂಪರ್ಕ ತಡೆ ಹಿಡಿಯಲು ಕೋರಿರುವದಾಗಿ ತಿಳಿಸುತ್ತಾ, ರಾಜ್ಯದ ಮುಖ್ಯಮಂತ್ರಿಗಳು ಈ ಯೋಜನೆ ಬೇಡವೆಂದು ಘೋಷಿಸಬಾರದೇಕೆ? ಎಂದು ಮರು ಪ್ರಶ್ನಿಸಿದ್ದಾರೆ.

ಕೊಡಗಿಗೆ ಮಾರಕವಾಗಿರುವ ಈ ರೈಲ್ವೇ

(ಮೊದಲ ಪುಟದಿಂದ) ಯೋಜನೆಯನ್ನು ಯಾವ ಕಾರಣಕ್ಕೂ ತಾನು ಸೇರಿದಂತೆ ಬಿಜೆಪಿ ಒಪ್ಪಿಕೊಳ್ಳುವದಿಲ್ಲವೆಂದೂ, ಈ ದಿಸೆಯಲ್ಲಿ ರೈಲ್ವೇ ಸಚಿವರೊಂದಿಗೆ ವ್ಯವಹರಿ ಸುತ್ತಿರುವದಾಗಿಯೂ ತಿಳಿಸಿರುವ ಪ್ರತಾಪ್ ಸಿಂಹÀ, ಜಿಲ್ಲೆಯ ಜನತೆಯ ನಿಲುವಿಗೆ ತಾನು ವಿರುದ್ಧವಾಗಿ ನಡೆದು ಕೊಳ್ಳುವದಿಲ ್ಲವೆಂದು ‘ಶಕ್ತಿ'ಗೆ ನೀಡಿರುವ ಹೇಳಿಕೆಯಲ್ಲಿ ಘೋಷಿಸಿದ್ದಾರೆ.