ಶ್ರೀಮಂಗಲ, ಜ. 20: ವೀರಾಜಪೇಟೆ ತಾಲೂಕಿನಲ್ಲಿ ಕೃಷಿ ಇಲಾಖೆಯ ಜಲಾನಯನ ಯೋಜನೆ ಯಡಿ ದುರುಪಯೋಗವಾಗಿರುವ ಬಗ್ಗೆ ಲೋಕಾಯುಕ್ತಕ್ಕೆ ತಾಲೂಕು ಜಯಕರ್ನಾಟಕ ಸಂಘಟನೆ ದೂರು ಸಲ್ಲಿಸಿರುವದನ್ನು ಸ್ವಾಗತಿಸಲಾಗುವದು. ಆದರೆ ಇದರಲ್ಲಿ ಕೃಷಿ ಅಧಿಕಾರಿ ಎ.ಜೆ. ರೀನಾ ಅವರ ಮೇಲೆ ದೂರು ನೀಡಿರುವದು ಸರಿಯಲ್ಲ ಎಂದು ಟಿ. ಶೆಟ್ಟಿಗೇರಿಯ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಿ. ಶೆಟ್ಟಿಗೇರಿಯಲ್ಲಿ ರೈತ ಪ್ರಮುಖರು ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ರೈತರಿಗೆ ಸರಕಾರದ ಯೋಜನೆಯನ್ನು ಸಮರ್ಪಕವಾಗಿ ಮತ್ತು ನೈಜ ಫಲಾನುಭವಿಗಳಿಗೆ ವಿನಿಯೋಗಿಸುವಲ್ಲಿ ಸಮರ್ಪಕವಾಗಿ ಮತ್ತು ನೈಜ ಫಲಾನುಭವಿಗಳಿಗೆ ವಿನಿಯೋಗಿಸುವಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷಿ ಅಧಿಕಾರಿ ಎ.ಜೆ. ರೀನಾ ಅವರ ಮೇಲೆ ಆರೋಪ ಮಾಡಿರುವದು ಸರಿಯಲ್ಲ ಎಂದು ಹೇಳಿದ್ದಾರೆ.

ಸಭೆಯಲ್ಲಿ ಟಿ. ಶೆಟ್ಟಿಗೇರಿಯ ಹಿರಿಯ ಕಾಂಗ್ರೆಸ್ ಮುಖಂಡ ಎ.ಪಿ. ಮೋಟಯ್ಯ, ತಾಲೂಕು ಬಿ.ಜೆ.ಪಿ. ರೈತ ಮೋರ್ಚಾದ ಅಧ್ಯಕ್ಷ ಕಟ್ಟೇರ ಕೆ. ಈಶ್ವರ, ಮಾಯಣಮಾಡ ಬೋಪಯ್ಯ, ಸಿ.ಎಂ. ಉದಯ, ಎಂ.ಟಿ. ನಾಚಪ್ಪ, ಚೆಟ್ಟಮಾಡ ದೇವಯ್ಯ, ಕೊಕ್ಕಲೆಮಾಡ ಕುಶಾಲಪ್ಪ, ಮುಕ್ಕಾಟಿರ ಅರುಣ ಹಾಜರಿದ್ದರು.