*ಗೋಣಿಕೊಪ್ಪಲು, ಜ. 20: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ವಲಯ ಸಾಕಾನೆ ಶಿಬಿರದಿಂದ 3 ಆನೆಗಳು ಛತ್ತೀಸ್‍ಗಡ್‍ಗೆ ತೆರಳಲಿವೆ.

ದುರ್ಯೋಧನ (32) ಗಂಗೆ (21), ಯೋಗಲಕ್ಷ್ಮಿ (15) ಈ ಆನೆಗಳು ಸೋಮವಾರ ತೆರಳಲಿವೆ. ದುರ್ಯೋಧನ ಆನೆಯನ್ನು ಫೆ. 26, 2016ರಂದು ಕೊಳ್ಳೇಗಾಲ ವನ್ಯಜೀವಿ ವಿಭಾಗದ ರಾಂಪುರ ವಲಯದಲ್ಲಿ ಸೆರೆ ಹಿಡಿಯಲಾಗಿತ್ತು. ಕಾವಾಡಿ ಜಿ.ಎ. ಸಂತೋಷ್ ನೋಡಿಕೊಳ್ಳುತ್ತಿದ್ದಾರೆ. ಗಂಗೆಯನ್ನು ಸುಂಕದ ಕಟ್ಟೆ ಆನೆಶಿಬಿರ, ಅಂತರಸಂತೆ ವನ್ಯಜೀವಿ ವಿಭಾಗದಿಂದ ತರಲಾಗಿತ್ತು. ಇದನ್ನು ಕಾವಾಡಿ ನಂಜುಂಡಸ್ವಾಮಿ ನೋಡಿಕೊಳ್ಳುತ್ತಿ ದ್ದಾರೆ. ಯೋಗಲಕ್ಷ್ಮಿಯನ್ನು ಅಂತರಸಂತೆ ವನ್ಯಜೀವಿ ವಿಭಾಗದಿಂದ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ತರಲಾಗಿತ್ತು. ಇದನ್ನು ಕಾವಾಡಿ ಹರೀಶ್ ನೋಡಿಕೊಳ್ಳುತ್ತಿದ್ದಾರೆ. ಆನೆಗಳನ್ನು ಛತ್ತೀಸ್‍ಗಡ್ ರಾಜ್ಯ ಸರ್ಕಾರ ಕೇಳಿರುವದರಿಂದ ಅವುಗಳನ್ನು ಶಾಶ್ವತವಾಗಿ ಕಳಿಸಿಕೊಡಲಾಗುತ್ತಿದೆ ಎಂದು ಸಾಕಾನೆ ಶಿಬಿರದ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ತಿಳಿಸಿದರು.