ನಾಪೆÇೀಕ್ಲು, ಜ. 20: ನಾಪೆÇೀಕ್ಲು ನಿವಾಸಿ ಮೇದ ಜನಾಂಗದ ವಾಸು ಅನಾರೋಗ್ಯಕ್ಕೀಡಾಗಿ ನಡೆಯಲಾರದ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಗಮನಿಸಿದ ಬೊಪ್ಪಂಡ ಕಾಶಿ ನಂಜಪ್ಪ, ಶಿವಚಾಳಿಯಂಡ ಜಗದೀಶ್, ಕಂಗಾಂಡ ಜಾಲಿ ಪೂವಪ್ಪ, ಪಾಡಿಯಮ್ಮಂಡ ಮನು ಮಹೇಶ್, ಬಾಳೆಯಡ ಸರಿ, ಚಿಯಕಪೂವಂಡ ಸುರಿ ಇವರುಗಳು ವಾಸುವನ್ನು ಜಿಲ್ಲಾ ಆಸ್ವತ್ರೆಗೆ ದಾಖಲಿಸಿದರು. ಆದರೆ, ಅಲ್ಲಿಯ ವ್ಯೆದ್ಯಾಧಿಕಾರಿಗಳು ಪರಿಶಿಷ್ಟ ಈ ವ್ಯಕ್ತಿಯನ್ನು ತಿರುಗಿಯೂ ನೋಡದಿರುವಾಗ ಇನ್ನೂ ಸುಮ್ಮನ್ನಿದ್ದರೆ ಪ್ರಯೋಜನ ಇಲ್ಲ ಎಂದು ಮನಗಂಡು ತಾವೇ ಖುದ್ದು ಹಣ ಸಂಗ್ರಹಿಸಿ ಸುಮಾರು ರೂ. 10 ಸಾವಿರ ನೀಡಿ ಆ್ಯಂಬ್ಯುಲೆನ್ಸ್ ಮುಖಾಂತರ ಸುಳ್ಯದ ಕೆ.ವಿ.ಜಿ. ಆಸ್ವತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ವಾಸು ಮೇದರ ಜನಾಂಗಕ್ಕೆ ಸೇರಿದ ವ್ಯಕ್ತಿಯಗಿದ್ದು ಈತ ಹುತ್ತರಿ, ಹಬ್ಬ-ಹರಿದಿನ, ಸಾವು ಮೊದಲಾದ ಸಂದರ್ಭ ಪರೆ (ಡೋಲು) ಬಾರಿಸಿ ಜೀವನ ಸಾಗಿಸುತ್ತಿದ್ದ ಊರೂರಿಗೂ ಪರೆ ಬಾರಿಸಲು ಹೋಗುತ್ತಿದ್ದ. ಇವರಿಗೆ ಸಹಕರಿಸಿ ಸಹಾಯ ನೀಡುವವರು, ವಿ.ಎಸ್.ಎಸ್.ಎನ್. ಬ್ಯಾಂಕ್ ನಾಪೆÇೀಕ್ಲು ನಂ. 4261 ಕ್ಕೆ ಜಮಾ ಮಾಡಬಹುದಾಗಿದೆ. - ದುಗ್ಗಳ ಸದಾನಂದ