ಮಡಿಕೇರಿ, ಜ. 19: ಇಲ್ಲಿನ ನಗರಸಭಾ ಕಟ್ಟಡದ ಸ್ಪೈಸಸ್ ಮಳಿಗೆಯಲ್ಲಿ ಮೊಬೈಲ್ ಮುಖಾಂತರ ಜೂಜಾಡುತ್ತಿದ್ದ ಆರೋಪಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು, 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರಸಭಾ ಕಟ್ಟಡದ ಕೂರ್ಗ್ ಸ್ಪೈಸಸ್ ಮಳಿಗೆಯಲ್ಲಿ ಕೇರಳ ಮೂಲದ ಅರವಿಂದನ್ ಹಾಗೂ ರಾಜ ಮತ್ತು ಇತರ 15 ಮಂದಿ ಅಕ್ರಮ ಜೂಜಿನಲ್ಲಿ ತೊಡಗಿದ್ದಾಗಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಷಣ್ಮುಖಪ್ಪ ಅವರು ಖಚಿತಪಡಿಸಿದ್ದಾರೆ.
ಇಲಾಖೆಗೆ ಲಭಿಸಿದ ಖಚಿತ ಸುಳಿವಿನ ಮೇರೆಗೆ ಧಾಳಿ ನಡೆಸಿದ್ದು, ಆರೋಪಿಗಳಿಂದ 11 ಮೊಬೈಲ್‍ಗಳು ಸೇರಿದಂತೆ ರೂ. 3000ದಷ್ಟು ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ. ಸಾರ್ವಜನಿಕರು ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಸಲಹೆ ನೀಡಿದ್ದಾರೆ.