ಗೋಣಿಕೊಪ್ಪಲು, ಜ. 20: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ಕುಂಞಪ್ಪ ಮೆಮೋರಿಯಲ್ ಸಭಾಂಗಣದಲ್ಲಿ ಇತ್ತೀಚೆಗೆ 9ನೇ ರಾಷ್ಟ್ರಮಟ್ಟದ ಓಕಿನೊವಾ ಶೋರಿನ್ ಕೈ ಕರಾಟೆ ಶಿಬಿರವು ನಡೆಯಿತು. ಈ ಶಿಬಿರದ ನೇತೃತ್ವವನ್ನು ಜಪಾನಿನ ಹನ್ಸಿ ಕಿಶೂನ್ ಕಕಿನೋನ, ಸೆನ್ಸಿ ಮಸಾವೊ ತಮಾóಷಿರೊ, ಸೆನ್ಸಿ ಸಂಜೀವ್ ಸ್ರೇಸ್ತ ಹಾಗೂ ಸೆನ್ಸಿ ಸುನಿಲ್ ಕುಮಾರ್ ಯಶಸ್ವಿಯಾಗಿ ನಿರ್ವಹಿಸಿದರು. ನ್ಯಾಷನಲ್ ಅಕಾಡೆಮಿ ಶಾಲೆಯ ಸಂಸ್ಥಾಪಕಿ ಶಾಂತಿ ಅಚ್ಚಪ್ಪ ಹಾಗೂ ಪ್ರಾಂಶುಪಾಲ ಅರುಣ್ ಕುಮಾರ್ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಶಾಲೆಯ 1ನೇ ತರಗತಿಯಿಂದ 8ನೇ ತರಗತಿವರೆಗಿನ ಸುಮಾರು 45 ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಬೆಲ್ಟ್‍ಗಳನ್ನು ಪಡೆದುಕೊಂಡರು.