ವಿಶೇಷ ವರದಿ : ಎಂ.ಎನ್. ಚಂದ್ರಮೋಹನ್ಕು ಶಾಲನಗರ, ಜ. 19: ಇಂದು ದುಬಾರೆ ಗಜ ಶಿಬಿರದಲ್ಲಿ ಆನೆಗಳೆಲ್ಲ ನಾಪತ್ತೆ. ಒಂದೆರಡು ತರಬೇತಿಗೆ ಒಳಗಾದ ಮರದ ಕಿರಾಲುವಿನಲ್ಲಿ s ಸೆರೆಯಲ್ಲಿರುವ ಆನೆಗಳನ್ನು ಬಿಟ್ಟರೆ ದುಬಾರೆ ಆನೆ ಶಿಬಿರದ 30ಕ್ಕೂ ಅಧಿಕ ಆನೆಗಳು ಶಿಬಿರದೊಳಗೆ ಮಾಯ ವಾಗಿದ್ದವು. ಶಿಬಿರಕ್ಕೆ ಬಂದ ಪ್ರವಾಸಿಗರು ಆನೆಗಳನ್ನು ನೋಡ ಲಾಗದೆ ಪರದಾಡುತ್ತಿದ್ದುದು ಗೋಚರವಾಯಿತು. ಈ ನಡುವೆ ಕಾವೇರಿ ನದಿಯಲ್ಲಿನ ನೀರು ಇಂಗುತ್ತಿದ್ದು ದೋಣಿಯಾನವೂ ಸ್ಥಗಿತ ಗೊಂಡಿದೆ. ಈ ವರ್ಷ ಪ್ರವಾಸಿಗರು ನಿರಾಶೆ ಗೊಳ್ಳುವ ಪರಿಸರ ಶಿಬಿರದಲ್ಲಿ ಎದ್ದು ಕಾಣುತ್ತಿದೆ.
ಈ ಬಗ್ಗೆ ‘ಶಕ್ತಿ’ ಕುತೂಹಲದಿಂದ ತಲೆಯಿಕ್ಕಿ, ಶಿಬಿರದ ಒಳ ಹೊಕ್ಕು ನೋಡಿದಾಗ ಆಶ್ಚರ್ಯ ಕಾದಿತ್ತು. ಸುಮಾರು 60 ಮಂದಿ ಮಾವುತರು, ಸಹಾಯಕರು ಹಾಗೂ ಅವರ ಕುಟುಂಬಗಳು ಅಲ್ಲಲ್ಲಿ ಚದುರಿ ಹೋಗಿದ್ದು, ಮಾವುತರ ನಾಯಕ ಜೆ.ಕೆ. ಡೋಬಿ
(ಮೊದಲ ಪುಟದಿಂದ) ಮತ್ತಿನ್ನು ಕೆಲವರು ಮಾತ್ರ ಸ್ಥಳದಲ್ಲಿ ಕಂಡು ಬಂದರು. ಆನೆಗಳೆಲ್ಲ ಶಿಬಿರ ಬಿಟ್ಟು ಕಾಡು ಸೇರಿಕೊಂಡಿದ್ದವು. ಕಾರಣ ಹುಡುಕಿದಾಗ ಡೋಬಿ ಹೇಳಿದ್ದು ಹೀಗೆ: ನಮಗೆ ಅತ್ಯಂತ ಪ್ರಿಯವಾದ 3 ಆನೆಗಳನ್ನು ಸದ್ಯದಲ್ಲಿಯೇ ಚತ್ತೀಸ್‍ಘಡಕ್ಕೆ ಕಳುಹಿಸುತ್ತಾರಂತೆ. ಅಜಯ (27), ತೀರ್ಥರಾಮ (25) ಹಾಗೂ ಪರಶುರಾಮ (18) ಈ ಮೂರು ಆನೆಗಳನ್ನು ಅರಣ್ಯ ಅಧಿಕಾರಿಗಳು ಚತ್ತೀಸ್ ಘಡಕ್ಕೆ ಕಳುಹಿಸುತ್ತಾರಂತೆ. ನಾವು ಅವುಗಳನ್ನು ಬೆಳೆಸಿ, ಪೋಷಿಸಿ ಆಹಾರವುಣಿಸಿ ನಮ್ಮ ಬಂಧುಗಳಂತೆ ಉಳಿಸಿ ಕೊಂಡಿದ್ದೇವೆ. ಈಗ ಅವುಗಳನ್ನು ಕಳೆದುಕೊಳ್ಳಲು ತೀವ್ರ ದು:ಖವಾಗುತ್ತಿದೆ. ಕಳೆದ ವರ್ಷ ಇಲ್ಲಿಂದ ಮೂರು ಆನೆಗಳನ್ನು ಉತ್ತರಾಖಂಡ್‍ಗೆ ಕಳುಹಿಸಲಾಗಿತ್ತು. ಆ ಪೈಕಿ ಶಿವಗಂಗೆ (33) ಅನಾರೋಗ್ಯ ದಿಂದ ನರಳುತ್ತಿದೆ ಎಂದು ಕೇಳಿ ಆಘಾತವಾಗಿದೆ. ಈಗ ಮತ್ತೆ ಕಳುಹಿಸಬೇಕೆಂದರೆ ನಾವು ತಯಾರಿಲ್ಲ ಎಂದು ನೊಂದು ನುಡಿದರು. ಈ ಹಿನ್ನೆಲೆಯಲ್ಲಿ ಮಾವುತರೆಲ್ಲ ಸೇರಿ ಎಲ್ಲ 30 ಆನೆಗಳನ್ನು ತಮ್ಮ ಸನ್ನೆ , ಮಾತುಗಳ ನಿರ್ದೇಶನದ ಮೂಲಕ ಕಾಡಿಗೆ ಕಳುಹಿಸಿದ್ದರು. ಆದರೆ ಕೆಲವು ಸಮಯದ ಬಳಿಕ 27 ಆನೆಗಳನ್ನು ಕಾಡಿನಿಂದ ಹಿಂದಕ್ಕೆ ಕರೆಸಿಕೊಂಡಿದ್ದು, ಚತ್ತೀಸ್‍ಘಡಕ್ಕೆ ಕಳುಹಿಸಬೇಕಾದ 3 ಆನೆಗಳು ಮಾತ್ರ ಇತರ ಯಾರ ಕೈಗೂ ಸಿಗದಂತೆ ಕಾಡಿಗೆ ಬಿಡಲಾಗಿತ್ತು. ಈ ಘಟನೆ ರೋಚಕವೂ ಹೌದು, ಮಾವುತರು- ಆನೆಗಳ ನಡುವಿನ ಬಾಂಧÀವ್ಯದ ಬೆಸುಗೆಯ ಹಿನ್ನೆಲೆಯ ದ್ಯೋತಕವೂ ಹೌದು.
ಮಾವುತ ಮುಖಂಡ ಡೋಬಿ ಮತ್ತಿತರ ಕೆಲವರ ಅನಿಸಿಕೆಯಂತೆ ಮೈಸೂರು ದಸರಾಕ್ಕೆ ಇಲ್ಲಿಂದ ಆನೆಗಳನ್ನು ಒಯ್ಯಲಾಗುತ್ತದೆ. ಸ್ಥಳೀಯ ಕಾಡಾನೆ ಉಪಟಳವನ್ನು ನಿಗ್ರಹಿಸಲು, ಆನೆಗಳನ್ನು ಸೆರೆ ಹಿಡಿಯಲು ಮತ್ತಿತರ ಕಾರ್ಯಗಳಿಗೂ ಆನೆಗಳು ಸಾಕಷ್ಟು ಪ್ರಮಾಣದಲ್ಲಿ ಅಗತ್ಯವಿದೆ. ಎಷ್ಟೋ ವರ್ಷಗಳಿಂದ ಆನೆಗಳನ್ನು ತರಬೇತಿಗೊಳಿಸಿ ಜಿಲ್ಲೆಯ ಹಾಗೂ ರಾಜ್ಯದ ಅಗತ್ಯ ಮತ್ತು ಉತ್ತಮ ಉದ್ದೇಶದ ಕಾರ್ಯಗಳಿಗೆ ಬೇಕಾದಾಗ ಬೇರೆ ರಾಜ್ಯಗಳಿಗೆ ಕಳುಹಿಸುವದೇಕೆ? ಇಲ್ಲಿ ವ್ಯವಸ್ಥೆಗೆ ಹೊಂದಾಣಿಕೆಗೊಂಡು ನೆಮ್ಮದಿಯಲ್ಲಿರುವ ಆನೆಗಳನ್ನು ಬೇರೆಡೆಗೆ ಒಯ್ಯುವದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಎಲ್ಲ ಬೆಳವಣಿಗÉಗಳ ಕುರಿತು ಅರಣ್ಯ ಉಪಸಂರಕ್ಷಣಾಧಿಕಾರಿ ಸೂರ್ಯ ಸೇನ ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಕೇಂದ್ರ ಸರಕಾರದ ಒಪ್ಪಿಗೆ ಮೇರೆಗೆ ರಾಜ್ಯ ಸರಕಾರಗಳು ಈ ಪ್ರಕ್ರಿಯ ನಡೆಸುತ್ತವೆ. ಇಂತಹ ನಿರ್ಧಾರಗಳಿಗೆ ಮಾವುತರು ವಿರೋಧ ವ್ಯಕ್ತಪಡಿಸಿದರೆ ಅದರ ವಿರುದ್ಧ ಇಲಾಖೆಯಿಂದ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಾವುತರಾದ ಡೋಬಿ ಮತ್ತು ಅವರ ಕುಟುಂಬಸ್ಥರೇ ಈ ಮೂರು ಆನೆಗಳನ್ನು ನಿರ್ವಹಿಸಿ ಆ ವ್ಯಾಮೋಹ ದಲ್ಲೆ ಅವರು ಈ ರೀತಿ ವಿರೋಧಿಸುತ್ತಿರಬಹುದು. ಆದರೆ, ಸರಕಾರೀ ನಿರ್ಧಾರವನ್ನು ಪಾಲಿಸ ದಿದ್ದರೆ ಕಾನೂನು ಉಲ್ಲಂಘನೆಯಾಗುತ್ತÀದೆ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಉತ್ತರಾಖಂಡ್‍ಗೆ ದುಬಾರೆಯ 3 ಆನೆಗಳೂ ಸೇರಿದಂತೆ ತಿತಿಮತಿ ಮತ್ತು ಮತ್ತಿಗೋಡು ಆನೆ ಶಿಬಿರಗಳಲ್ಲಿನ ಆನೆಗಳನ್ನೂ ಒಳಗೊಂಡು ಒಟ್ಟು 11 ಆನೆಗಳನ್ನು ಕಳುಹಿಸಲಾಗಿತ್ತು. ದುಬಾರೆಯಿಂದ ಕಳುಹಿಸಿದÀ ಆನೆಗಳ ಪೈಕಿ ಶಿವಗಂಗೆಗೆ ತೊಂದರೆಯಾಗಿದೆ ಎನ್ನುವದು ಕÉೀವಲ ಊಹಾಪೋಹ. ಇಲ್ಲ್ಲಿಂದ ಕಳುಹಿಸಿರುವ ಎಲ್ಲ ಆನೆಗಳೂ ಸುಸ್ಥಿತಿಯಲ್ಲಿವೆ ಎಂದು ಸೂರ್ಯಸೇನ ಖಚಿತಪಡಿಸಿದರು.
ಚತ್ತೀಸ್‍ಘಡದಲ್ಲಿ ಕಾಡಾನೆಗಳ ಹಾವಳಿಯಿಂದ ವಾರ್ಷಿಕ ಸರಾಸರಿ ಎಂಬಂತೆ ಸುಮಾರು 70 ಮಾನವ ಜೀವಗಳಿಗೆ ಹಾನಿಯುಂಟಾಗುತ್ತಿದೆ. ಅಲ್ಲಿ ಕಾಡಾನೆಗಳನ್ನು ನಿಯಂತ್ರಿಸಲು ಸೆರೆ ಹಿಡಿದು ತರಬೇತಿಗೊಳಿಸಲು ಸಾಕಾನೆಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ದುಬಾರೆ ಶಿಬಿರದಿಂದ 3 ಹಾಗೂ ತಿತಿಮತಿಯಿಂದ 3 ಆನೆÉಗಳನ್ನು ಕಳುಹಿಸಲು ಚತ್ತೀಸ್‍ಘಡದ ಕೋರಿಕೆ ಮೇರೆÀಗೆ ಕರ್ನಾಟಕ ಸರಕಾರ ಸ್ಪಂದಿಸಿ ಆದೇಶ ಕಳುಹಿಸಿದೆ. ತಾ. 22 ರಂದು ಲಾರಿಗಳಲ್ಲಿ ಈ ಆನೆಗಳನ್ನು ಕಳುಹಿಸಲಾಗುತ್ತಿದೆ. ಈ ಆನೆಗಳನ್ನು ಕಳುಹಿಸುವದರಿಂದ ಇಲ್ಲಿ ಯಾವದೆ ಧಕ್ಕೆಯುಂಟಾಗದು. ಮೈಸೂರು ದಸರಾಗೆ ಕಳುಹಿಸÀಲು ಬೇರೆಯೇ ಆನೆಗಳಿವೆ. ದಸರಾಕ್ಕೆ ಗೋಪಿ, ಹರ್ಷ, ಪ್ರಶಾಂತ್, ವಿಕ್ರಮ, ಕಾವೇರಿ ಮತ್ತು ವಿಜಯ- ಈ ಆನೆಗಳನ್ನು ಕಳುಹಿಸಿಕೊಡಲಾಗುತ್ತಿದೆ. ಆದರೆ, ಬಿಹಾರ ರಾಜ್ಯದಿಂದಲೂ ಬೇಡಿಕೆ ಬಂದಾಗ ಜಿಲ್ಲಾ ಅರಣ್ಯ ಇಲಾಖೆ ಯಿಂದ ಕಳುಹಿಸಲು ಸಾಧ್ಯವಾಗು ವದಿಲ್ಲ ಎಂಬ ಅಂಶವನ್ನು ಪತ್ರದ ಮೂಲಕ ತಿಳಿಸಲಾಗಿದೆ. ಏಕೆಂದÀರೆ ಇದೀಗ ಉತ್ತರಾಖಂಡ್‍ಗೆ ಕಳುಹಿಸಲಾಗುತ್ತಿರುವ 3 ಆನೆಗಳನ್ನು ಹೊರುತಪಡಿಸಿ ಉಳಿದ ಆನೆಗಳು ಕರ್ನಾಟಟಕ್ಕೇ ಅಗತ್ಯವಿದೆ ಎಂಬದನ್ನು ಮನದಟ್ಟು ಮಾಡಲಾಗಿದೆ ಎಂದೂ ಅಧಿಕಾರಿ ವಿವರಿಸಿದರು.
ಮುಖ್ಯವಾಗಿ ಆನೆಗಳ ಸಂತತಿ ಬೆಳೆಯಬೇಕಾದರೆ ಹೆಣ್ಣಾನೆಗಳು ಅಗತ್ಯ. ಈಗ ದುಬಾರೆಯಲ್ಲಿ ಮೂರು ಹೆಣ್ಣ್ಣಾನೆಗಳು ಮಾತ್ರ ಇವೆ. ಮೂರು ಮರಿಯಾನೆಗಳಿವೆ. ಇಲ್ಲಿಂದ ಹೆಣ್ಣಾನೆಗಳನ್ನು ಮಾತ್ರ ಎಲ್ಲಿಗೂ ಕಳುಹಿಸುವದಿಲ್ಲ ಎಂದು ಸೂರ್ಯಸೇನ ಸ್ಪಷ್ಟಪಡಿಸಿದರು.
ಈಗಾಗಲೇ ಚತ್ತೀಸ್‍ಘಡದಿಂದ 4 ಮಂದಿ ಮಾವುತರು ಕಳೆದ ಸೆಪ್ಟೆಂಬರ್‍ನಲ್ಲಿಯೇ ದುಬಾರೆ ಶಿಬಿರಕ್ಕೆ ಬಂದಿದ್ದಾರೆ. ಆನೆಗಳ ನಿರ್ವಹಣೆಗೆ ಇಲ್ಲಿನ ಮಾವುತರಿಂದ ತರಬೇತಿ ಪಡೆದಿದ್ದಾರೆ ಎಂದು ಅವರು ತಿಳಿಸಿದರು.