ಮಡಿಕೇರಿ, ಜ. 21: ಭಾಗಮಂಡಲ ಹಾಗೂ ತಲಕಾವೇರಿ ಪಾವಿತ್ರ್ಯತೆ ಕಾಪಾಡಲು ಕ್ರಮಕೈಗೊಳ್ಳದಿದ್ದಲ್ಲಿ ಫೆ.2ರಂದು ಧರಣಿ ನಡೆಸುವದಾಗಿ ಕೊಡವ ಸಮಾಜಗಳ ಒಕ್ಕೂಟದ ಮಹಿಳಾ ವಿಭಾಗದ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಕ್ಷೇತ್ರಗಳಲ್ಲಿ ಸ್ವಚ್ಛತೆ ಕಾಪಾಡಲು ಜಿಲ್ಲಾಡಳಿತ ಹಾಗೂ ಭಾಗಮಂಡಲ ಕ್ಷೇತ್ರ ಸಮಿತಿ ಕ್ರಮಕೈಗೊಳ್ಳಬೇಕು, ಬ್ರಹ್ಮಗಿರಿಗೆ ಪ್ರವೇಶ ನಿಷೇಧಿಸಬೇಕೆಂದು ಮಹಿಳಾ ವಿಭಾಗದ ಅಧ್ಯಕ್ಷೆ ಇಮ್ಮಿ ಉತ್ತಪ್ಪ ಒತ್ತಾಯಿಸಿದ್ದಾರೆ.