ಮಡಿಕೇರಿ, ಜ. 21 : ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಚಾಲನೆ ನೀಡಿದರು. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಒಟ್ಟು ರೂ. 38 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯಲಿದೆ.
ಕೆ. ನಿಡುಗಣೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ನಿರ್ಮಲಗಿರಿ ಕಾಲೋನಿ, ಪಿಂಟೊ ತಿರುವಿನಿಂದ ಕರ್ಣಂಗೇರಿ ಸಂಪರ್ಕ ರಸ್ತೆ, ಮೊಣಕಾಲ್ಮುರಿ ರಸ್ತೆ, ಉಕ್ಕುಡ ರಸ್ತೆ, ಕರ್ಣಂಗೇರಿ ಕೋಟೆಕಾಡು, ಪರಿಶಿಷ್ಟ ಜಾತಿ ಕಾಲೋನಿ ರಸ್ತೆ, ಇಗ್ಗುತಪ್ಪ ರಸ್ತೆ ಸೇರಿದಂತೆ ಹೆಬ್ಬೆಟ್ಟಗೇರಿ, ಗಾಳಿಬೀಡು ಸಂಪರ್ಕ ರಸ್ತೆ, ಕೆ. ಬಾಡಗ, ಭದ್ರಕಾಳಿ ದೇವಸ್ಥಾನದಿಂದ ಕೆ.ನಿಡುಗಣೆ ಹಾಗೂ ಸಿದ್ದಿಕಾಡುವಿನಿಂದ ಸುಬ್ಬಮ್ಮಂಡ ರಸ್ತೆ ಮತ್ತು ಹೆಬ್ಬೆಟ್ಟಗೇರಿ ಶಾಲೆ ಬಾಣೆಯಿಂದ ಪರಿಶಿಷ್ಟÀ ಕಾಲೋನಿಯವರೆಗೆ ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ಕರ್ಣಂಗೇರಿ ಗ್ರಾಮದಲ್ಲಿ ಎಂಎಲ್‍ಸಿ ವೀಣಾಅಚ್ಚಯ್ಯ ರಸ್ತೆ ಕಾಮಗಾರಿಗೆ ಸಾಂಕೇತಿಕವಾಗಿ ಭೂಮಿಪೂಜೆ ನೆರವೇರಿಸಿದರು.
ಗ್ರಾ.ಪಂ ಸದಸ್ಯರಾದ ಜಾನ್ಸನ್ ಪಿಂಟೊ, ಹೆಚ್.ಆರ್.ಪ್ರೇಮ್‍ಕುಮಾರ್, ಕರ್ಣಂಗೇರಿ ಗ್ರಾಮದ ಜಗದೀಶ್, ತಂಗಚ್ಚನ್, ಬಸಪ್ಪ, ಪ್ರತಾಪ್, ಮೊಯಿದು, ಪಿ.ಆರ್.ಡೆನ್ನಿ, ವಿಜಯಕುಮಾರ್, ಶರೀಫ್, ಹೆಚ್.ಆರ್.ರವಿ, ಇಬ್ರಾಹಿಂ, ಸಲೀಂ, ಗಣೇಶ, ಅಜೀóಜ್, ಮೊಯ್ದೀನ್ ಅಬ್ದುಲ್ಲಾ, ರವಿ ಮತ್ತಿತರರು ಉಪಸ್ಥಿತರಿದ್ದರು.