*ಸಿದ್ದಾಪುರ, ಜ. 21: ಜಾತಿ ಆಧಾರದ ಮೇಲೆ ರಾಜಕೀಯ ಪಕ್ಷದವರು ಅಭ್ಯರ್ಥಿಗÀಳಿಗೆ ಟಿಕೇಟ್ ನೀಡದಂತೆ ಆಗ್ರಹಿಸಿ ಚೆಟ್ಟಳ್ಳಿ ಜನಪರ ಹೋರಾಟ ಸಮಿತಿ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದಲ್ಲಿ ತಲಕಾವೇರಿಯಿಂದ ಮಡಿಕೇರಿಯ ವರೆಗೆ ಕಾಲ್ನಡಿಗೆ ಜಾಥಕ್ಕೆ ತಲಾಕಾವೇರಿಯಲ್ಲಿ ಪೂಜೆಸಲ್ಲಿಸಿ ಚಾಲನೆ ನೀಡಲಾಯಿತು. ಜಾತಿ ಆಧಾರದ ಮೇಲೆ ಪ್ರಭಾವಿಗಳು ರಾಜಕೀಯ ಪಕ್ಷಗಳೊಂದಿಗೆ ಒತ್ತಡ ಹೇರುತ್ತಿದ್ದು ರಾಜಕೀಯ ಪಕ್ಷಗಳು ಆಯ್ಕೆ ಸಂದರ್ಭ ಕೊಡಗಿನ ಅಭಿವೃದ್ಧಿಗೆ ಒತ್ತು ನೀಡುವ ಜನಬೆಂಬಲವಿರುವ ಹಾಗೂ ಮತ ಭೇದವಿಲ್ಲದೆ ಸಾಮರಸ್ಯ ಮೂಡಿಸುವವರಿಗೆ ಟಿಕೆಟ್ ನೀಡಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ತ¯ಕಾವೇರಿ ಹಾಗೂ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಬಲ್ಲಾರಂಡ ಮಣಿ ಉತ್ತಪ್ಪ ಕಾಲ್ನಡಿಗೆ ಜಾಥಾ ಆರಂಭಿಸಿದರು.

ತಲಕಾವೇರಿ, ಭಾಗಮಂಡಲ, ಚೆಟ್ಟಿಮಾನಿ ಹಾಗೂ ಚೇರಂಬಾಣೆ ಪಾದಯಾತ್ರೆಯು ಸಾಗಿ ಬರುತ್ತಿದ್ದಂತೆ ಅಲ್ಲಿನ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ನೆರೆದು ಕಾಲ್ನಡಿಗೆಯ ಜಾಗೃತಿ ಜಾಥಾಕ್ಕೆ ಬೆಂಬಲ ಸೂಚಿಸಿದರಲ್ಲದೆ. ಬಲ್ಲಾರಂಡ ಮಣಿ ಉತ್ತಪ್ಪ ಅವರ ಜನರಪರ ಕಾಳಜಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಪಾದಯಾತ್ರೆ ರಾತ್ರಿ 9.15ಕ್ಕೆ ಮಡಿಕೇರಿ ನಗರವನ್ನು ಪ್ರವೇಶಿಸಿತು. ಈ ಮಧ್ಯೆ ತಾಳತ್‍ಮನೆ ಸಮೀಪ ಶಾಸಕತ್ರಯರಾದ ಕೆ.ಜಿ. ಬೋಪಯ್ಯ ಮತ್ತು ಎಂ.ಪಿ. ಅಪ್ಪಚ್ಚು ರಂಜನ್. ಸುನಿಲ್ ಸುಬ್ರಮಣಿ ಎದುರುಗೊಂಡು ಬಲ್ಲಾರಂಡ ಮಣಿ ಉತ್ತಪ್ಪ ಅವರ ಹೋರಾಟಕ್ಕೆ ಶುಭ ಹಾರೈಸಿದರು.

ಜನಪರ ಹೋರಾಟ ಸಮಿತಿ ಅಧ್ಯಕ್ಷ ನೂಜಿಬೈಲು ನಾಣಯ್ಯ, ಸದಸ್ಯರುಗಳಾದ ಹೆಚ್.ಎಸ್. ತಿಮ್ಮಪ್ಪಯ್ಯ, ಧನಂಜಯ, ಬಿ.ಕೆ. ಸೀತಮ್ಮ ಶಾಂತಪ್ಪ, ಅಂಬುದಾಸ್, ಪೇರಿಯನ ಪೂಣ್ಣಚ್ಚ, ಕೊಳಂಬೆ ಯಾದವ, ಸಿ.ಬಿ.ಸೋಮೇಶ, ಬಟ್ಟೀರ ಅಪ್ಪಣ್ಣ, ಎನ್.ಎಸ್.ರವಿ, ಪುತ್ತೇರಿರ ಸೀತಮ್ಮ ಕೊಂಗೇಟಿರ ವಾಣಿಕಾಳಪ್ಪ, ಕಣಜಾಲು ಪೂವಯ್ಯ, ವಾಲ್ನೂರು ತ್ಯಾಗತ್ತೂರು ಪಂಚಾಯಿತಿ ಸದಸ್ಯ ಅಂಚೆಮನೆ ಸುಧಿ, ಕಂಠಿಕಾರ್ಯಪ್ಪ, ಪೊರಿಯಂಡ ದಿನುದೇವಯ್ಯ, ಅಡಿಕೇರಿಯ ಜಯಮುತ್ತಪ್ಪ, ಮೋನ್ಸಿ, ಎಚಿಟಿ.ದೇವಿಯಾನಿ, ಮರದಾಳು ಉಲ್ಲಾಸ್, ಹಾಗೂ ಚೋಳಪಂಡ ಪೂವಯ್ಯ ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. -ಅಂಚೆಮನೆ ಸುಧಿ