ಮಡಿಕೇರಿ, ಜ. 21: ತಾಳತ್‍ಮನೆಯ ನೇತಾಜಿ ಯುವಕ ಹಾಗೂ ಯುವತಿ ಮಂಡಲದ 26ನೇ ವಾರ್ಷಿಕೋತ್ಸವ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ 121ನೇ ಜನ್ಮ ದಿನಾಚರಣೆಯು ತಾ. 23 ರಂದು ತಾಳತ್ತಮನೆಯ ಆಟದ ಮೈದಾನದಲ್ಲಿ ನಡೆಯಲಿದೆ.

ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್, ಥ್ರೋಬಾಲ್ ಹಾಗೂ ಮ್ಯಾರಥಾನ್ ಓಟದ ಸ್ಪರ್ಧೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ವಾಲಿಬಾಲ್ ಪುರುಷರ ತಂಡದ ಸ್ಪರ್ಧೆಯಾಗಿದ್ದು, ಥ್ರೋಬಾಲ್ ಮಹಿಳೆಯರ ತಂಡದ ಸ್ಪರ್ಧೆಯಾಗಿರುತ್ತದೆ. ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಲಾಗುವದು. ಮ್ಯಾರಥಾನ್ ಓಟದ ಸ್ಪರ್ಧೆಯು ಪುರುಷರ, ಮಹಿಳೆಯರ, ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ವಿದ್ಯಾರ್ಥಿನಿಯರ ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಸಲಾಗುವದು. ಇದರಲ್ಲಿ ಮೊದಲ ಐದು ಸ್ಥಾನ ಪಡೆದವರಿಗೆ ಟ್ರೋಫಿ ಮತ್ತು ನಗದು ಬಹುಮಾನಗಳನ್ನು ನೀಡಲಾಗುವದು.ಹೆಚ್ಚಿನ ಮಾಹಿತಿಗಾಗಿ 9611084030ನ್ನು ಸಂಪರ್ಕಿಸಬಹುದು.