ಗೋಣಿಕೊಪ್ಪ, ಜ. 22 : ಅಮ್ಮಕೊಡವ ಜನಾಂಗದ ನಡುವೆ ನಡೆಯಲಿರುವ 4 ನೇ ವರ್ಷದ ಪುತ್ತಮನೆ ಕ್ರಿಕೆಟ್ ಕಪ್ ಲಾಂಛನ ಅನಾವರಣ ಕಾರ್ಯಕ್ರಮ ಜನವರಿ ತಾ. 28 ರಂದು ನಡೆಯಲಿದೆ. ಅಖಿಲ ಅಮ್ಮಕೊಡವ ಸಮಾಜ ಹಾಗೂ ಪುತ್ತಮನೆ ಕುಟುಂಬ ಸಹಯೋಗದಲ್ಲಿ ಗೋಣಿಕೊಪ್ಪದಲ್ಲಿ ರುವ ಅಖಿಲ ಅಮ್ಮಕೊಡವ ಸಮಾಜ ಸಭಾಂಗಣದಲ್ಲಿ ಅಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ. ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರತ್ಯು, ಪುತ್ತಮನೆ ಕುಟುಂಬ ಅಧ್ಯಕ್ಷ ಪುತ್ತಮನೆ ಎಂ. ಗಣೇಶ್ ಪಾಲ್ಗೊಳ್ಳಲಿದ್ದಾರೆ.