ಮಡಿಕೇರಿ, ಜ. 22 : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಫೆ. 10 ರಂದು ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಅರೆಭಾಷೆ ಗೌಡರ ವಧೂ, ವರರ ಸಮಾವೇಶ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಕೋರನ ಸಿ.ವಿಶ್ವನಾಥ್ ಕಳೆದ 10 ವರ್ಷಗಳಿಂದ ವಧು, ವರರ ಸಮಾವೇಶವನ್ನು ನಡೆಸಲಾಗುತ್ತಿದ್ದು, ಸುಮಾರು 40 ಜೋಡಿಗಳ ವಿವಾಹ ಇಲ್ಲಿಯವರೆಗೆ ನಡೆದಿದೆ ಎಂದರು.

ಹಳ್ಳಿಗಳಲ್ಲಿ ನೆಲೆಸಿರುವ ಜನಾಂಗ ಬಾಂಧವರಿಗೆ ಸಹಕಾರಿಯಾಗಲಿ ಎನ್ನುವ ಕಾರಣಕ್ಕಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ವಿವಾಹ ವಯಸ್ಸಿನ ಹುಡುಗ ಹಾಗೂ ಹುಡುಗಿಯ ಸಂಪೂರ್ಣ ಮಾಹಿತಿ ಸಂಘದ ಮೂಲಕ ಸಂಗ್ರಹಿಸಲಾಗುತ್ತದೆ. ಇದರಿಂದ ಆಸಕ್ತರಿಗೆ ಹೆಚ್ಚು ಅನುಕೂಲವಾಗಲಿದೆ ಮತ್ತು ಅರೆಭಾಷೆ ಗೌಡ ಕುಟುಂಬಗಳು ಒಂದೆಡೆ ಸೇರಿ ಸೂಕ್ತ ವಧು-ವರರನ್ನು ಆಯ್ಕೆ ಮಾಡಲು ಸುಲಭವಾಗಲಿದೆ ಎಂದು ತಿಳಿಸಿದರು. ಸಂಘ ಆಸಕ್ತರ ಸ್ವವಿವರ ಮತ್ತು ಎಲ್ಲಾ ಮಾಹಿತಿಗಳನ್ನು ಅರ್ಜಿಯ ಮೂಲಕ ಸಂಗ್ರಹಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿ ಎಂದು ವಿಶ್ವನಾಥ್ ತಿಳಿಸಿದರು.

ಮೊ.ಸಂ : 9379213818, 9739495381, 8105298898.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ ಹಾಗೂ ಖಜಾಂಚಿ ಪೊನ್ನಚನ ಜಿ.ಸೋಮಣ್ಣ, ಉಪಸ್ಥಿತರಿದ್ದರು.