ಸುಳ್ಯ, ಜ. 22: ಭಾಷಾ ಸೌಹಾರ್ದತೆಯ ಮೂಲಕ ಮನುಷ್ಯ ಮನುಷ್ಯರ ನಡುವೆ ಸೌಹಾರ್ದತೆ ಮೂಡುತ್ತದೆ. ಹಿರಿಯರ ಲಾಗಾಯಿತ್ತಿನಿಂದ ಬಂದ ಮತೀಯ ಸಾಮರಸ್ಯ ಈಗ ಕಡಿಮೆಯಾಗುತ್ತಿದ್ದು, ಭಾಷಾ ಸೌಹಾರ್ದತೆಯ ಮೂಲಕ ಮತೀಯ ಸಾಮರಸ್ಯವನ್ನು ಉಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ಸುಳ್ಯದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಭಾಷಾ ಸೌಹಾರ್ದ ಸಂಭ್ರಮ ಹಾಗೂ ಅಕಾಡೆಮಿಯ ನೂತನ ಅಧ್ಯಕ್ಷರ ಮತ್ತು ಸದಸ್ಯರುಗಳ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಸುಳ್ಯ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ವಿಶಿಷ್ಟ ಪರಂಪರೆಯ ದೇಶ. ಅನೇಕತೆ ಇಲ್ಲಿನ ಹೆಚ್ಚುಗಾರಿಕೆ. ಭಾಷೆಯ ಬಳಕೆ ಜಾಸ್ತಿಯಾದಷ್ಟು ಭಾಷೆ ಬೆಳವಣಿಗೆಯಾಗುತ್ತದೆ. ಅರೆಭಾಷೆ ಅಕಾಡೆಮಿಯ ಸ್ಥಾಪನೆಯಿಂದ ಅರೆಭಾಷೆ ಬೆಳೆದಿದೆ. ಅಕಾಡೆಮಿಗಳ
(ಮೊದಲ ಪುಟದಿಂದ) ಮೂಲಕ ಭಾಷಾ ಸಾಹಿತ್ಯದ ಪ್ರಸರಣವೂ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪಿ.ಸಿ ಜಯರಾಮ್ ವಹಿಸಿ, ಪ್ರಸ್ತಾವನೆ ಗೈದು ಮಾತನಾಡಿ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದ ನಂತರ ಅರೆಭಾಷೆ ಬೆಳವಣಿಗೆಯ ದೃಷ್ಟಿಯಿಂದ ಸಾಕಷ್ಟು ಕೆಲಸಕಾರ್ಯಗಳು ನಡೆದಿದೆ. ಇನ್ನಷ್ಟು ಬೆಳವಣಿಗೆ ಮತ್ತು ಭಾಷೆ ಉಳಿವಿಗಾಗಿ ಪಠ್ಯಪುಸ್ತಕದಲ್ಲಿ ಭಾಷೆಯನ್ನು ಅಳವಡಿಸುವಲ್ಲಿ, ಸಾಂಸ್ಕøತಿಕ ವಾಗಿಯೂ ಜನಮನ ಮುಟ್ಟುವಂತೆ ಮತ್ತು ಮುಂದಿನ ಯುವಪೀಳಿಗೆ ಮಾರ್ಗದರ್ಶನದ ದೃಷ್ಟಿಯಿಂದ ಕಾರ್ಯಯೋಜನೆಯನ್ನು ಹಾಕಿಕೊಂಡಿದ್ದೇವೆ. ಭಾಷೆ ಉಳಿದರೆ ಸಂಸ್ಕøತಿ-ಆಚಾರ-ವಿಚಾರ ಉಳಿಯುತ್ತದೆ ಎಂದರು.
ತಾಲೂಕು ಅಕ್ಷರ ದಾಸೋಹ ಅಧಿಕಾರಿ ಚಂದ್ರಶೇಖರ ಪೇರಾಲು ಅರೆಭಾಷೆ ಮತ್ತು ಸಂಸ್ಕøತಿ ಬಗ್ಗೆ ವಿಚಾರ ಮಂಡಿಸಿ ಮಾತನಾಡಿ, ಒಕ್ಕಲುಮಸೂದೆ ಕಾನೂನಿನ ಮೂಲಕ ಗೌಡ ಸಮುದಾಯದ ಜೀತದಾಳು ಪದ್ಧತಿಯಿಂದ ಗೌಡ ಸಮುದಾಯದ ಜನ ಬಂಧಮುಕ್ತರಾದರು. ಡಾ.ಕುರುಂಜಿಯವರ ವಿದ್ಯಾಸಂಸ್ಥೆಗಳ ಮೂಲಕ ಇಲ್ಲಿನ ಸಾಕಷ್ಟು ಗೌಡಸಮುದಾಯ ವಿದ್ಯಾವಂತ ರಾಗಲು ಸಾಧ್ಯವಾಯಿತು. ಗೌಡರ ಮೂಲ ಸಂಸ್ಕøತಿ ಮತ್ತು ಸಾವಯವ ಕೃಷಿಯನ್ನು ಇಂದಿಗೂ ಮುಂದು ವರಿಸುತ್ತಾ ಬಂದಿದ್ದಾರೆ. ಇನ್ನು ಮುಂದೆಯೂ ಮುಂದಿನ ಯುವಪೀಳಿಗೆ ಭಾಷೆಯನ್ನು ಉಳಿಸಿದರೆ ಸಂಸ್ಕøತಿ ಉಳಿಯಲು ಸಾಧ್ಯ. ಈ ದೃಷ್ಟಿಯಿಂದ ಅರೆಭಾಷೆ ಮಾತನಾಡಲು ಹಿಂಜರಿಕೆ ಬೇಡ ಎಂದರು.
ಅತಿಥಿಗಳಾಗಿ ಅಕಾಡೆಮಿ ಅಫ್ ಲಿಬರಲ್ ಎಜ್ಯುಕೇಶನ್‍ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕೊಲ್ಯದ ಗಿರೀಶ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌಡ ಯುವ ಸೇವಾ ಸಂಘ ಸುಳ್ಯದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ, ದ.ಕ. ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಸಾಮಾಜಿಕ ಧುರೀಣರಾದ ಭರತ್ ಮುಂಡೋಡಿ, ನ್ಯಾಯವಾದಿಗಳಾದ ಎಂ. ವೆಂಕಪ್ಪ ಗೌಡ, ಜಯಪ್ರಕಾಶ್ ರೈ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್, ಕರ್ನಾಟಕ ರಾಜ್ಯ ವಕ್ಪ್ ಕೌನ್ಸಿಲ್ ಸದಸ್ಯ ಯಸ್.ಸಂಶುದ್ದೀನ್, ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಸಹಕಾರಿ ದುರೀಣ ಜಾಕೆ ಮಾಧವ ಗೌಡ, ಶ್ರೀ ವೆಂಕಟರಮಣ ಕ್ರೇಡಿಟ್ ಕೋ- ಆಪರೇಟಿವ್ ಸೊಸೈಟಿ ಸುಳ್ಯದ ಅಧ್ಯಕ್ಷ ಚಂದ್ರಾಕೋಲ್ಚಾರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಅಕಾಡೆಮಿ ಸದಸ್ಯರುಗಳಾದ ಮಾಧವ ಗೌಡ, ತಿರುಮಲೇಶ್ವರಿ, ಚಿದಾನಂದ ಬೈಲಾಡಿ, ಯತೀಶ್‍ಕುಮಾರ್ ಗೌಡ, ಪರಶುರಾಮ ಚಿಲ್ತಡ್ಕ, ಕೆ.ಟಿ.ವಿಶ್ವನಾಥ್, ದೇವರಾಜ್ ಬಿ.ಡಿ, ಬಾರಿಯಂಡ ಜೋಯಪ್ಪ, ಕಡ್ಲೇರ ತುಳಸಿಮೋಹನ್, ಎ.ಕೆ. ಹಿಮಕರ, ಸುರೇಶ್ ಎಮ್.ಎಚ್, ಕುಂಬುಗೌಡನ ಪ್ರಸನ್ನ, ಕಾನೆಹಿತ್ಲು ಮೊಣ್ಣಪ್ಪ ಇದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಅರೆಭಾಷೆ ಅಕಾಡೆಮಿಯ ನೂತನ ಅಧ್ಯಕ್ಷ ಪಿ.ಸಿ.ಜಯರಾಮ ಹಾಗೂ ಸದಸ್ಯರುಗಳನ್ನು ಉಸ್ತುವಾರಿ ಸಚಿವ ರಮಾನಾಥ ರೈ ಅಭಿನಂದಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಉಮ್ಮರಬ್ಬ ಸ್ವಾಗತಿಸಿ, ಶಶಿಧರ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಕವಿಗೋಷ್ಠಿ
ಈ ಸಂದರ್ಭ ಏರ್ಪಡಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಅರೆಭಾಷೆಯಲ್ಲಿ ಸುಳ್ಯದ ಹಿರಿಯ ಕವಿಯತ್ರಿ ಜಯಮ್ಮ ಚೆಟ್ಟಿಮಾಡ, ಗಾಯಕ ಶಶಿಧರ ಮಾವಿನಕಟ್ಟೆ, ಕನ್ನಡದಲ್ಲಿ ಗಾಯಕಿ ರಮ್ಯ ದಿಲೀಪ್, ಕೊಡವ ಭಾಷೆಯಲ್ಲಿ ಸಾಹಿತಿ, ಪತ್ರಕರ್ತ ಚಟ್ಟಂಗಡ ರವಿ ಸುಬ್ಬಯ್ಯ, ಬ್ಯಾರಿ ಭಾಷೆಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಬಶೀರ್ ಅಹಮ್ಮದ್, ತುಳು ಭಾಷೆಯಲ್ಲಿ ರಮೇಶ್ ಮೆಟ್ಟಿನಡ್ಕ, ಕೊಂಕಣಿ ಭಾಷೆಯಲ್ಲಿ ಕೈಲಾಸ್ ಶೆಣೈ ಇವರುಗಳು ಕವನ ವಾಚಿಸಿದರು. ಬಳಿಕ ಅರೆಭಾಷೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.