ಗೋಣಿಕೊಪ್ಪ ವರದಿ, ಜ. 22 : ಕೊಡಗು ಮೂಲಕ ಕೇರಳಕ್ಕೆ ಕೊಂಡೊಯ್ಯಲು ಉದ್ದೇಶಿರುವ ರೈಲ್ವೆ ಮಾರ್ಗ ವಿರೋಧಿಸಿ ಬೆಂಗಳೂರಿನಲ್ಲಿ ಕೊಡಗು, ಚಿಕ್ಕಮಗಳೂರು, ಬೆಂಗಳೂರಿನ ಜನತೆಯಿಂದ ಪ್ರತಿಭಟನೆ ನಡೆಸಲಾಯಿತು.94ರ ವಯೋಮಾನದ ಹಿರಿಯ ಬಿದ್ದಾಟಂಡ ಪೊನ್ನಪ್ಪ ಹಾಗೂ 4 ರ ಹರೆಯದ ಪುಟ್ಟ ಬಾಲಕಿ ಪ್ರತಿಭಟನೆಗೆ ಚಾಲನೆ ನೀಡಿದರು.ಅಲ್ಲಿನ ಕಬ್ಬನ್ ಪಾರ್ಕ್ನಲ್ಲಿ ಸೇರಿದ ಸುಮಾರು 170 ಕ್ಕೂ ಹೆಚ್ಚು ಜನತೆ ಮಾನವ ಸರಪಳಿ ನಿರ್ಮಿಸಿ ವಿರೋದ ವ್ಯಕ್ತಪಡಿಸಿದರು. ಸಮಸ್ಯೆ ಬಗೆಹರಿಸಲು ಹೋರಾಟ ನಡೆಸಲು ಸಮಿತಿ ರಚಿಸಲು ತೀರ್ಮಾನ ಕೈಗೊಳ್ಳಲಾಯಿತು.
ಮೈಸೂರು - ತಲಚೇರಿ ಮಾರ್ಗ ಮತ್ತು ಕುಶಾಲನಗರದ ಮೂಲಕ ಮಡಿಕೇರಿ ರೈಲ್ವೆ ಮಾರ್ಗವನ್ನು ಖಂಡಿಸಿ ಸಭೆ ನಡೆಸಲಾಯಿತು. ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ, ಪರಿಸರ ಛಾಯಾಗ್ರಾಹಕ ಮುತ್ತಣ್ಣ, ಮೇಜರ್ ಜನರಲ್ (ನಿ) ಕೊಡಂದೇರ ಅರ್ಜುನ್ ಮುತ್ತಣ್ಣ, ಒಲಿಂಪಿಯನ್ ಡಾ. ಎ. ಬಿ. ಸುಬ್ಬಯ್ಯ, ಪಾಲ್ಗೊಂಡಿದ್ದರು.