ಒಡೆಯನಪುರ, ಜ. 22: ‘ಕ್ರೀಡಾ ಚಟುವಟಿಕೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ’ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನಸ್ವಾಮೀಜಿ ಅಭಿಪ್ರಾಯ ಪಟ್ಟರು. ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರಾ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ 2018ನೇ ಸಾಲಿನ ಜಿಲ್ಲಾ ಮಟ್ಟದ ವೀರಶೈವ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಯೊಬ್ಬರ ಜೀವನ ಜಂಜಾಟದ ಶಮನಕ್ಕೆ ವ್ಯಾಯಾಮ, ಕ್ರೀಡಾ ಚಟುವಟಿಕೆಯ ಅಗತ್ಯವಿದೆ, ಇದರಿಂದ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ವೃದ್ದಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಲ್ಲುಮಠದ ಮಹಾಂತಸ್ವಾಮೀಜಿ, ವೀರಾಜಪೇಟೆ ಕನ್ನಡ ಮಠದ ಚನ್ನಬಸವ ದೇಶೀಕೇಂದ್ರಸ್ವಾಮಿ, ಅಂಕನಹಳ್ಳಿ ತಪೋವನ ಮಠದ ಮಹಾಂತಶ್ವಲಿಂಗಸ್ವಾಮಿ, ಕಲ್ಲಳ್ಳಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಮಹೇಶ್, ವೀರಶೈವ ಸಮಾಜದ ಪ್ರಮುಖರಾದ ಜಿ.ಎಂ.ಕಾಂತರಾಜ್, ಕೆ.ಬಿ.ಹಾಲಪ್ಪ, ಎಸ್.ಎಸ್.ಸುರೇಶ್, ಸಾವಿತ್ರಮ್ಮ ನೀಲಕಂಠಪ್ಪ, ಎಚ್.ಸಿ. ಯತೀಶ್‍ಕುಮಾರ್, ಎಂ.ಎಸ್. ಶಿವಕುಮಾರ್, ವಾಣಿಗಿರೀಶ್, ಎಚ್.ಎಸ್. ಪ್ರೇಮ್‍ನಾಥ್, ನಿರ್ಮಲವಸಂತ್ ಮುಂತಾದ ವರಿದ್ದರು.

-ವಿ.ಸಿ.ಸುರೇಶ್ ಒಡೆಯನಪುರ