ಕೂಡಿಗೆ, ಜ. 22: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು-ಕಾಳಿದೇವರ ಹೊಸೂರು ಶ್ರೀ ಕಾಳಿಕಾಂಬ ಯುವಕ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಉತ್ಸವದ ಸಮಾರೋಪ ಸಮಾರಂಭ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಗಿರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ.ಚಾಮಿ, ಗ್ರಾಮ ಪಂಚಾಯ್ತಿ ಸದಸ್ಯ ಹೆಚ್.ಎಸ್.ರವಿ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಶೋಭಾ ಪುಟ್ಟಪ್ಪ, ಕೆ.ಬಿ.ಧನಂಜಯ್, ಮಾಜಿ ಸದಸ್ಯರಾದ ವಿಮಲ ಸುರೇಶ್, ಜಾನಮ್ಮ, ಅಕ್ಕಮ್ಮ, ಮಾರ, ರಾಮೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಐ.ಎಸ್.ಗಣೇಶ್, ದೇವಾಲಯ ಸಮಿತಿಯ ಉಪಾಧ್ಯಕ್ಷ ಎನ್.ಎಸ್.ಮುತ್ತಪ್ಪ, ದೊಡ್ಡೀರ ಸುಶೀಲ, ಸಿ.ಎಂ.ಮಂಜುನಾಥ್ ಆಗಮಿಸಿದ್ದರು. ಈ ಸಂದರ್ಭ ಗ್ರಾಮದ ನಿವಾಸಿಯಾದ ಕೊಡಗು ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಂಡಳಿ ಅಧಿಕಾರಿ, ರಾಜ್ಯ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ವಿಜೇತೆ ಶಾಂತಿ ಅಣ್ಣಯ್ಯ ಮತ್ತು ರಸ್ತೆ ಬದಿಗೆ ಮರಗಳನ್ನು ನಿಟ್ಟು ವರ್ಷಗಟ್ಟಲೇ ಪೋಷಿಸಿದ ಪರಿಸರ ಪ್ರೇಮಿ ಸಿ. ಜೆ. ಬೋಪಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಬಡ್ಡಿ ಪಂದ್ಯಾಟದಲ್ಲಿ ಬ್ಯಾಡಗೊಟ್ಟ ತಂಡ ಪ್ರಥಮ, ಕೂಡಿಗೆ ತಂಡ ದ್ವಿತೀಯ, ಮಹಿಳೆಯರ ಥ್ರೋಬಾಲ್‍ನಲ್ಲಿ ಯಡವನಾಡು ಪ್ರಥಮ, ಬಸವನಹಳ್ಳಿ ದ್ವಿತೀಯ ಸ್ಥಾನ, ಪುರುಷರ ವಾಲಿಬಾಲ್‍ನಲ್ಲಿ ಬಸವನಹಳ್ಳಿ ಪ್ರಥಮ, ಬ್ಯಾಡಗೊಟ್ಟ ಅಣ್ಣಯ್ಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. ಸಾಂಸ್ಕøತಿಕ ಉತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಕರಾಟೆ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆದವು. ರವಿ ಸ್ವಾಗತಿಸಿ, ಚೇತನ್ ವಂದಿಸಿದರು.