*ಗೋಣಿಕೊಪ್ಪಲು, ಜ. 23: ತಾ. 28ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ 119ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗು ವದು. ಈ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ತಿಳಿಸಿದರು.
ಸಿಲ್ವರ್ ಸ್ಕೈ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಜನ್ಮ ದಿನಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 28ರಂದು ಬೆಳಿಗ್ಗೆ 9.30ಕ್ಕೆ ಬಸ್ ನಿಲ್ದಾಣದಿಂದ ಕಾರ್ಯಪ್ಪ ಹಾಗೂ ತಿಮ್ಮಯ್ಯ ಅವರ ಸ್ಮಾರಕದವರೆಗೆ ಮೆರವಣಿಗೆ ನಡೆಯಲಿದೆ. ನಂತರ ಮುಖ್ಯ ಅತಿಥಿ ಗಳಿಂದ ಭಾಷಣ, ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಮೆರುಗು ನಡೆಯಲಿದೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ನಿವೃತ್ತ ಸೈನಿಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಶಾಲಾ ಕಾಲೇಜು ಮಕ್ಕಳಿಗೆ ತಾಲೂಕು ಮಟ್ಟದ ರಾಷ್ಟ್ರಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ ರಾಷ್ಟ್ರಗೀತೆ ಸ್ಪರ್ಧೆ ಪ್ರಾರಂಭವಾಗಲಿದ್ದು, ಜೂನಿಯರ್ ವಿಭಾಗದಲ್ಲಿ 7ನೇ ತರಗತಿ ವಿದ್ಯಾರ್ಥಿ ಗಳು, ಸೀನಿಯರ್ ವಿಭಾಗದಲ್ಲಿ 8ರಿಂದ 10ನೇ ತರಗತಿವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಲಿದೆ. ಕಾಲೇಜು ವಿಭಾಗದಲ್ಲಿ ಪ್ರಥಮ ಪಿ.ಯು.ಸಿ.ಯಿಂದ ಪದವಿ ತರಗತಿವರೆಗಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಿ, ಶಿಸ್ತಿನಿಂದ ಭಾಗವಹಿಸಬೇಕು ಎಂದು ತಿಳಿಸಿದರು.
ಕೊಡಂದೇರ ಕುಟುಂಬದ ಅಧ್ಯಕ್ಷ ಸುಬ್ಬಯ್ಯ ಮಾತನಾಡಿ, ಅಂತರಾಷ್ಟ್ರ ಮಟ್ಟದ ನಾಯಕರ ಜನ್ಮದಿನಾಚರಣೆ ಆಚರಿಸಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಗೌರವ ಸಲ್ಲಿಸಬೇಕು. ಇವರ ಗೌರವಾರ್ಪಣೆ ಗಾಗಿ ಮುಖ್ಯ ರಸ್ತೆಯ ಬದಿಯಲ್ಲಿ ಸ್ಮಾರಕ ನಿರ್ಮಾಣಗೊಂಡು ಹೊಸ ಮೆರುಗನ್ನು ನೀಡಿದೆ. ಮುಂದಿನ ವರ್ಷಗಳಲ್ಲಿ ಸ್ಮಾರಕವನ್ನು ಇನ್ನಷ್ಟು ಆಕರ್ಷಕವಾಗಿಸಲು ರಕ್ಷಣಾ ಸಚಿವಾಲಯದಿಂದ 2 ತೋಪುಗಳ ರಾಕೆಟ್ ಲಾಂಚನ್ನು ಇಲ್ಲಿ ತರಲಾಗುವದು. ದೇಶದ ರಕ್ಷಣೆಗೆ ಜಿಲ್ಲೆಯಿಂದ ಉತ್ತಮ ಕೊಡುಗೆಯನ್ನು ನೀಡಿದವರ ಜನ್ಮ ದಿನಾಚರಣೆ ಆಚರಣೆಯಿಂದ ಮಕ್ಕಳಲ್ಲಿ ಹೊಸ ಗುರಿ ಮತ್ತು ಜೀವನದ ಉದ್ದೇಶವನ್ನು ಹೊಂದುವಂತಾಗಲಿ ಎಂಬ ನಿಟ್ಟಿನಲ್ಲಿ ಜನ್ಮ ದಿನಾಚರಣೆಯನ್ನು ಎಫ್. ಎಂ.ಸಿ.ಜಿ.ಟಿ.ಎಫ್ ಸಂಸ್ಥೆ ಆಚರಿಸಲು ಮುಂದಾಗಿದೆ. ಇದಕ್ಕಾಗಿ ಕನ್ನಡ ಸಂಸ್ಕøತಿ ಇಲಾಖೆ ಹಣ ಸಹಾಯ ಮಾಡಬೇಕೆಂಬ ಮನವಿಯನ್ನು ಸಹ ಸಲ್ಲಿಸಿದ್ದೇವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜನ್ಮ ದಿನಾಚರಣೆಯ ಸಂಚಾಲಕರುಗಳಾದ ಕಬ್ಬಚ್ಚಿರ ಸುಬ್ರಮಣಿ, ಮನೆಯಪಂಡ ಸೋಮಣ್ಣ ಉಪಸ್ಥಿತರಿದ್ದರು.