ಕೂಡಿಗೆ, ಜ. 23: ಯುವಕ ನೋರ್ವ ತನ್ನನ್ನು ಮದುವೆಯಾಗಿ ಬಳಿಕ ವಂಚಿಸಿರುವದಾಗಿ ವಿಧವೆ ಮಹಿಳೆಯೊಬ್ಬರು ಪೊಲೀಸ್ ದೂರು ನೀಡಿರುವ ಘಟನೆ ನಡೆದಿದೆ.
ಕೂಡ್ಲೂರು ನವಗ್ರಾಮದ ಯಮುನಾ ಎಂಬವರು ಹೇಳುವಂತೆ ಮೊದಲ ಪತಿಯ ನಿಧನ ನಂತರ ಎರಡು ಮಕ್ಕಳೊಂದಿಗೆ ತನ್ನ ತಾಯಿಯ ಮನೆಯಲ್ಲಿದ್ದೆ. ಗೆಳತಿ ಯೊಬ್ಬಳ ಮೂಲಕ ಪರಿಚಯವಾದ ಅದೇ ಗ್ರಾಮದ ರಾಜೇಶ್ ಕುಶಾಲನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಅವನ ಒತ್ತಾಯದ ಮೇರೆಗೆ ಹೊಳೆನರಸಿಪುರ ಸಮೀಪದ ದೇವಾಲಯವೊಂದರಲ್ಲಿ ಮದುವೆ ಯಾಗಿದ್ದು, 6 ತಿಂಗಳು ನನ್ನೊಂದಿಗಿದ್ದ ರಾಜೇಶ್ ತನ್ನ ತಂದೆ ತಾಯಿಯನ್ನು ಒಪ್ಪಿಸಿ, ತದನಂತರ ನನ್ನನ್ನು ಮನೆಗೆ ಕರೆದೊಯ್ಯುವದಾಗಿ ಹೇಳಿ ಹೋದವನು ಇದುವರೆಗೂ ಬಂದಿಲ್ಲ.
ಇಂದು ರಾಜೇಶ್ ಮನೆಯಲ್ಲಿ ರುವ ವಿಚಾರ ತಿಳಿದು ಯಮುನಾ ಮತ್ತು ಅವರ ತಾಯಿ ಅವರ ಮನೆಗೆ ಹೋದಾಗ ರಾಜೇಶ್ ಮನೆಯವರು ಯಮುನಾ ಅವರ ತಾಳಿಯನ್ನು ಕಿತ್ತು ಹಲ್ಲೆ ನಡೆಸಿದ್ದಾರೆ. ತನ್ನ ತಾಯಿಯ ಮೇಲೂ ಹಲ್ಲೆ ಮಾಡಿದ್ದಾರೆ. ಎಂದು ರಾಜೇಶ್ ಹಾಗೂ ಆತನ ತಾಯಿ ಲತ ಅವರ ವಿರುದ್ಧ ಯುಮುನಾ ಪೊಲೀಸ್ ದೂರು ನೀಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ದಂತೆ ರಾಜೇಶ್ ಸುದ್ಧಿಗಾರರೊಂದಿಗೆ ಮಾತನಾಡಿ, ಈ ವಿಚಾರದಲ್ಲಿ ನನಗೆ ಯಾವದೇ ರೀತಿಯ ಸಂಬಂಧ ಇಲ್ಲ. ಗೆಳತಿಯ ರೀತಿಯಲ್ಲಿ ಸೆಲ್ಫಿ ಫೋಟೋ ತೆಗೆದುಕೊಂಡು ನನಗೆ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಕ್ಕೆ ಗುರಿಯಾಗಿರುವ ರಾಜೇಶ್ ಅವರ ತಾಯಿಯೂ ಹಲ್ಲೆಗೊಳಗಾಗಿ ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್ಗೌಡ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.