ನಾಪೆÇೀಕ್ಲು, ಫೆ. 5: ಸಮೀಪದ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಸಿಬಿಎಸ್ಇ ವಿದ್ಯಾಸಂಸ್ಥೆಗಳ ನಡುವೆ ‘ಕಲಾ ವೈಭವ’ ಜಾನಪದ ನೃತ್ಯ ಹಾಗೂ ನಿರೂಪಣಾ ಸ್ಪರ್ಧೆಯನ್ನು ನಡೆಸಲಾಯಿತು. ಪ್ರಥಮ ಬಹುಮಾನವನ್ನು ಅರಮೇರಿಯ ಎಸ್.ಎಂ.ಎಸ್ ವಿದ್ಯಾಸಂಸ್ಥೆ, ದ್ವಿತೀಯ ಬಹುಮಾನವನ್ನು ಅಂಕುರ್ ಪಬ್ಲಿಕ್ ಶಾಲೆ ಪಡೆದುಕೊಂಡರೆ, ನಿರೂಪಣೆಯಲ್ಲಿ ಕೂಡಿಗೆಯ ಸೈನಿಕ್ ಶಾಲೆ ಪ್ರಥಮ, ಎಸ್.ಎಂ.ಎಸ್ ಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ತೀರ್ಪುಗಾರರಾಗಿ ನೃತ್ಯಕಲಾ ವಿದೂಷಿ ಜಲಜಾ ನಾಗರಾಜ್, ಕೆ.ಎಂ.ಕರುಂಬಮ್ಮಯ್ಯ ಮತ್ತು ವಿನಿತಾ ಕರುಂಬಮ್ಮಯ್ಯ ಪಾಲ್ಗೊಂಡಿದ್ದರು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಕೇಟೋಳಿರ ರಾಜಾ ಚರ್ಮಣ್ಣ, ಪ್ರಾಂಶುಪಾಲೆ ರತ್ನಾ ಚರ್ಮಣ್ಣ, ಮತ್ತಿತರರು ಇದ್ದರು.