ಸೋಮವಾರಪೇಟೆ, ಫೆ. 4: ಕರ್ನಾಟಕದ ಕಾಶ್ಮೀರ, ವೀರಸೇನಾನಿ ಗಳ ನಾಡಾಗಿರುವ ಪುಟ್ಟ ಕೊಡಗಿನಲ್ಲಿ ಕನ್ನಡ ನಾಡು, ನುಡಿ, ನೆಲ,ಜಲದ ಬಗ್ಗೆ ಹೋರಾಟ ಮಾಡುವ ಕಟ್ಟಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ದ್ದಾರೆ. ಇದರೊಂದಿಗೆ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಕೊಡಗಿನ ಸಾಹಿತ್ಯ ಕ್ಷೇತ್ರದ ಕೊಡುಗೆಯೂ ಅಪಾರವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದರು. ಕರವೇ ತಾಲೂಕು ಘಟಕದ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವರ್ಣರಂಜಿತ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 8ನೇ ವರ್ಷದ ತಾಲೂಕು ಸಮಾವೇಶ ಮತ್ತು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

2300 ವರ್ಷಗಳ ಇತಿಹಾಸವಿ ರುವ 8 ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀಮಂತ ಮಾತೃ

(ಮೊದಲ ಪುಟದಿಂದ) ಭಾಷೆಯನ್ನು ಪಡೆದ ಕನ್ನಡಿಗರೇ ಧನ್ಯರು. ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ 50ಕೋಟಿ ಜನರು ಮಾತನಾಡುವ ಹಿಂದಿ ಭಾಷೆಗೆ 6 ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ್ದರೆ, ಏಳೂವರೆ ಕೋಟಿ ಜನರು ಮಾತನಾಡುವ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಸಿಕ್ಕಿರುವದು ಭಾಷೆಯ ಶ್ರೀಮಂತಿಕೆ ಹಿಡಿದ ಕೈಗನ್ನಡಿ ಎಂದರು.

ವೇದಿಕೆಯ ಮೇಲಿದ್ದ ಅತಿಥಿ ಗಣ್ಯರು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾವಿರಾರು ಸಾರ್ವಜನಿಕರ ಸಮ್ಮುಖದಲ್ಲಿ ತಾಲೂಕು ಕರವೇ ಹೋರಾಟದ ಸಾಕ್ಷ್ಯಚಿತ್ರ, ಸ್ಥಳೀಯ ಪ್ರತಿಭೆ ಕರ್ಕಳ್ಳಿ ಸಂದೀಪ್ ಕುಮಾರ್ ನಿರ್ಮಾಣದ ‘ಈ ಸಂಜೆ’ ಧ್ವನಿಸುರಳಿ, ಕರವೇ ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್ ಮತ್ತು ಕು.ಶ್ರಾವಣಿ ಇವರುಗಳ ಸ್ವರಚಿತ ಕವನವನ್ನು ಬಿಡುಗಡೆ ಮಾಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ಶಿವಪ್ರಸಾದ್, ಕುಶಾಲನಗರ ಠಾಣೆಯ ಸಿಬ್ಬಂದಿ ಹರೀಶ್, ಕಲ್ಕಂದೂರಿನ ನಾರಾಯಣ ಪೂಜಾರಿ, ನಿವೃತ್ತ ಸೈನಿಕ ಬೆಳ್ಳಿಯಪ್ಪ, ಸಮಾಜ ಸೇವಕ ಮಹಮ್ಮದ್ ಅವರುಗಳನ್ನು ಸನ್ಮಾನಿಸಲಾಯಿತು. ಕೆ.ಪಿ. ಸುದರ್ಶನ್, ಎಚ್.ಕೆ.ಚಂದ್ರ, ಸಂತೋಷ್ ಅವರುಗಳನ್ನು ವರ್ಷದ ಕಾರ್ಯಕರ್ತರೆಂದು ಗುರುತಿಸಿ ಅಭಿನಂದಿಸಲಾಯಿತು.

ಹತ್ತನೆ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಕೇಂದ್ರೀಯ ವಿದ್ಯಾಲಯದ ಶ್ರೀವತ್ಸ ದೀಪಕ್ (100ಕ್ಕೆ 96), ಜ್ಞಾನವಿ ಕಿರಣ್ (100ಕ್ಕೆ 99), ಚಂದನ್ ರವೀಶ್ (125ಕ್ಕೆ 123), ಬಹುಮುಖ ಪ್ರತಿಭೆ ರೀಶಾ ರುಬೀನಾ ಅವರುಗಳನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ತಾಲೂಕು ಅಧ್ಯಕ್ಷ ಕೆ.ಎನ್.ದೀಪಕ್, ಮಹಿಳಾ ಘಟಕದ ಅಧ್ಯಕ್ಷೆ ರೂಪ ಸುರೇಶ್, ನರ್ಸಿಂಗ್ ಶಾಲೆ ವ್ಯವಸ್ಥಾಪಕ ಸುಲೈಮಾನ್, ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ.ನಂದ, ಆಟೋ ಯೂನಿಯನ್ ಅಧ್ಯಕ್ಷ ಮೋಹನ್, ಧರ್ಮಗುರು ಅಶ್ರಫ್ ಬಾಬ, ಪ್ರುಮುಖರಾದ ಅನಂತ್ ಕುಮಾರ್, ರಾಜು, ರಾಜ್ಯ ಘಟಕದ ಪದಾಧಿಕಾರಿಗಳಾದ ರೂಪ ಅಂಜನಪ್ಪ, ಬಾನಂದೂರು ಪಾಪಣ್ಣ, ಸತೀಶ್‍ಗೌಡ, ಸಹನಾ ಶ್ರೀಧರ್, ಪ್ರವೀಣ್ ಕುಮಾರ್, ಎಸ್.ಅಶೋಕ್, ಅನಂತ್ ಕುಮಾರ್ ಉಪಸ್ಥಿತರಿದ್ದರು. ಶಿಕ್ಷಕಿ ರಾಣಿ ರವೀಂದ್ರ, ರವೀಶ್, ಮಹಮ್ಮದ್ ಶಫಿ ಕಾರ್ಯಕ್ರಮ ನಿರ್ವಹಿಸಿದರು. ರಾತ್ರಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯನ್ನು ಸಾವಿರಾರು ಮಂದಿ ವೀಕ್ಷಿಸಿದರು. ಕಾರ್ಯಕ್ರಮದ ಅಂಗವಾಗಿ ಸೋಮವಾರಪೇಟೆ ಭಾಗದ ವಿವಿಧ ಶಾಲಾ ಕಾಲೇಜುಗಳ ತಂಡಗಳ ನಡುವೆ ನೃತ್ಯಸ್ಪರ್ಧೆ ಆಯೋಜಿಸಿ, ಬಹುಮಾನ ವಿತರಿಸಲಾಯಿತು.