ವೀರಾಜಪೇಟೆ, ಫೆ. 5: ಸರಕಾರದಿಂದ ಸಿಗುವಂತಹ ಸೌಲಭ್ಯ ಗಳನ್ನು ಕಡು ಬಡ ಕುಟುಂಬಗಳ ಫಲಾನುಭವಿಗಳು ಸದುಪಯೋಗ ಪಡಿಸಿಕೊಂಡು ಉತ್ತಮ ಬದುಕು ಸಾಗಿಸುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ಪಶುಪಾಲನಾ ಇಲಾಖೆ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ವೀರಾಜಪೇಟೆ ಪಶು ಆಸ್ಪತ್ರೆಯ ಆವರಣದಲ್ಲಿ ಪರಿಶಿಷ್ಟ ಜಾತಿ ಪಂಗಡದ ಫಲಾನುಭವಿಗಳಿಗೆ ವಿಶೇಷ ಘಟಕÀ ಯೋಜನೆಯಡಿ ಯಲ್ಲಿ ಉಚಿತ ಕೋಳಿ ಮರಿ ವಿತರಿಸಿ ಮಾತನಾಡಿದರು. ವೀರಾಜಪೇಟೆ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಎ.ಬಿ. ತಮ್ಮಯ್ಯ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಇಬ್ಬರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಒಬ್ಬರಿಗೆ 10 ಕೋಳಿ ಮರಿಗಳಂತೆ 800 ಮರಿಗಳನ್ನು ವಿತರಿಸಲಾಗುತ್ತಿದೆ ಎಂದರು.

ಈ ಸಂದರ್ಭ ಬಿ.ಜೆ.ಪಿ.ಯ ಬಿ.ಜಿ. ಸಾಯಿನಾಥ್, ಪಶು ವೈದ್ಯಾಧಿಕಾರಿ ಡಾ. ಟಿ.ಜೆ. ರಾಕೇಶ್ ಉಪಸ್ಥಿತರಿದ್ದರು.